ಹೋಂ ಗಾರ್ಡಗಳನ್ನ ಕೆಲಸದಿಂದ ತೆಗೆಯೋಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಯ ಹಸ್ತ

ಬೆಂಗಳೂರು: ಹೋಂಗಾರ್ಡ್ಸ್ ಸಿಬ್ಬಂದಿಗೆ ದಿನ ಭತ್ಯೆ ಹೆಚ್ಚಿಸಲಾಗಿದೆ. ಹೋಂಗಾರ್ಡ್ಸ್ ನವರ ವೇತನದಲ್ಲಿ ಕಡಿತ ಇಲ್ಲ. ಅಗತ್ಯಕ್ಕೆ ತಕ್ಕಂತೆ ಹೋಂಗಾರ್ಡ್ಸ್ ಸಿಬ್ಬಂದಿ ಬಳಕೆ ಮಾಡಿಕೊಳ್ಳುತ್ತೇವೆ. ಹೋಂಗಾರ್ಡ್ಸ್ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಮಹಾರಾಷ್ಟ್ರ ದಿಂದ ಬರೋರಿಗೆ ಹೋಮ್ ಕ್ವಾರಂಟೈನ್ 14 ದಿನ ಮಾಡಲು ಚಿಂತನೆ ಉನ್ನತ ಮಟ್ಟದಲ್ಲಿ ನಡೆದಿದೆ. ನಾಡಿದ್ದು ಈ ಬಗ್ಗೆ ಆದೇಶ ಬರಲಿದೆ. ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳ ಅಧಿಕಾರಿಗಳ ಜತೆ ಇವತ್ತು ಸಭೆ ಇತ್ತು. ಮಹಾರಾಷ್ಟ್ರದಿಂದ ಬರೋರ ಕ್ವಾರಂಟೈನ್, ಪರೀಕ್ಷೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಸಿಎಂ. ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರವಾಸ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.