ಕಾಂಗ್ರೆಸ್ ಹಿರಿಯ ಧುರೀಣ ಎಚ್.ಕೆ.ಪಾಟೀಲ ಮಾತೃವಿಯೋಗ… ನಾಳೆ ಅಂತ್ಯಕ್ರಿಯೆ…
1 min readಗದಗ: ಹಿರಿಯ ಕಾಂಗ್ರೆಸ್ ಧುರೀಣ ಎಚ್.ಕೆ.ಪಾಟೀಲ ಅವರ ತಾಯಿಯು ಇಂದು ಹುಬ್ಬಳ್ಳಿಯಲ್ಲಿ ನಿಧನರಾಗಿದ್ದು, ನಾಳೆ ಗದಗನ ಹುಲಕೋಟಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಾಜಿ ಸಚಿವ ಎಚ್.ಕೆ.ಪಾಟೀಲರ ತಾಯಿಯಾದ ಪದ್ಮಾವತಿ ಅವರು, ಹುಬ್ಬಳ್ಳಿಗೆ ವೈಧ್ಯರ ಬಳಿ ಆರೋಗ್ಯ ತಪಾಸಣೆಗೆ ಬಂದ ವೇಳೆಯಲ್ಲಿಯೇ ನಿಧನರಾಗಿದ್ದಾರೆಂದು ಗೊತ್ತಾಗಿದೆ.
ಪದ್ಮಾವತಿ ಪಾಟೀಲರ ಅಂತ್ಯಕ್ರಿಯೆ ನಾಳೆ ಹುಲಕೋಟಿಯಲ್ಲಿ ನಡೆಯಲಿದೆ. ಪದ್ಮಾವತಿ ಅವರು ಅಪಾರ ಬಂಧು ಬಳಗವನ್ನ ಅಗಲಿದ್ದು, ಪಾಟೀಲರ ಮನೆತನದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಸಂತಾಪ: ಪದ್ಮಾವತಿ ಪಾಟೀಲ ಅವರ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ ಸಂತಾಪ ಸೂಚಿಸಿದ್ದಾರೆ.