ರಾಜ್ಯ ಉಸ್ತುವಾರಿ ಬಂದರೂ ಎಚ್ಕೆ ಪಾಟೀಲ ದೂರ: ಸಚಿವ ಮಾಧುಸ್ವಾಮಿ ಎಚ್ಕೆ ಹೇಳಿದ್ದನ್ನೇ ಹೇಳಿದ್ದೇಕೆ..?
ಬೆಂಗಳೂರು: ಕಾಂಗ್ರೆಸ್ ಮುಖಂಡ, ಶಾಸಕ ಎಚ್.ಕೆ.ಪಾಟೀಲ್ ಹಾಗೂ ರಾಜ್ಯ ಕಾನೂನು ಸಚಿವ ಮಾಧವಸ್ವಾಮಿ ಅವರುಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಹೆಚ್ .ಕೆ ಪಾಟಿಲ್ ರವರು ಟ್ಟೀಟ್ ಮಾಡುವ ಮೂಲಕ ನನಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಲಕ್ಷಣ ರಹಿತ ಸೋಂಕಾಗಿದ್ದು, ಇದರಿಂದ ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನೀಗ ಆರೋಗ್ಯವಾಗಿದ್ದೇನೆ. 10 ದಿನಗಳ ಕಾಲ ಕ್ವಾರೈಂಟೈನ್ ನಲ್ಲಿರಲಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿರುವವರು ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಗಾಗಲು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಇತ್ತಿಚೆಗಷ್ಟೆ ಶಾಸಕ ಎಚ್.ಕೆ.ಪಾಟೀಲ್ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದರು. ಸದ್ಯ ಕೊರೋನಾ ಪಾಸಿಟಿವ್ ನಿಂದ ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.
ಇನ್ನು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಸಚಿವ ಮಾಧುಸ್ವಾಮಿಯವರು ಕೂಡಾ ತಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿಕೊಂಡಿದ್ದಾರೆ.
ಭಾನುವಾರಷ್ಟೇ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೂ ಕರೋನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದ್ದರಿಂದ ಹೋಂ ಐಸೋಲೇಶನ್ಗೆ ಒಳಪಟ್ಟಿದ್ದಾರೆ.