ಧಾರವಾಡ: ಹಿಟ್ ಆ್ಯಂಡ್ ರನ್- ಚೇಸಿಂಗ್ ಮಾಡಿ ಕಾರು ಹಿಡಿದ ಪೊಲೀಸರು…!!!
ಧಾರವಾಡ: ಸಂಚಾರಿ ನಿಯಮ ಉಲ್ಲಂಘಿಸಿ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಕಾರು ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಚೇಸಿಂಗ್ ಮಾಡಿ ಆಪಾದಿತನ ಸಮೇತ ಕಾರನ್ನ ವಶಕ್ಕೆ ಪಡೆದಿರುವ ಘಟನೆ ವಿದ್ಯಾಗಿರಿಯ ಜೆಎಸ್ಎಸ್ ಕಾಲೇಜು ಬಳಿ ಸಂಭವಿಸಿದೆ.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ರಾಂಗ್ ರೂಟ್‌ಲ್ಲಿ ಬಂದ ಕಾರು ಬೈಕಿನಲ್ಲಿ ಹೋಗುತ್ತಿದ್ದವನಿಗೆ ಡಿಕ್ಕಿ ಹೊಡೆದ ಪರಿಣಾಮ, ಸವಾರನ ಕಾಲು ತುಂಡರಿಸಿ ರಸ್ತೆಯಲ್ಲಿ ನರಳುತ್ತ ಬಿದ್ದಿದ್ದರು. ಸಾರ್ವಜನಿಕರು ಅತನನ್ನ ಕಾರಲ್ಲಿ ಹಾಕಿಕೊಂಡು ಆಸ್ಪತ್ರೆಗೆ ರವಾನೆ ಮಾಡಿದರು.
ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನ ಬೆನ್ನು ಬಿದ್ದ ಪೊಲೀಸರು ನವನಗರದ ಸಮೀಪ ಹಿಡಿದುಕೊಂಡು ಬಂದಿದ್ದು, ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
