Posts Slider

Karnataka Voice

Latest Kannada News

ಹಿಂದೂ ಯುವತಿಯರನ್ನ ಸಾಕಿ- ಅದೇ ಧರ್ಮದಂತೆ ಮದುವೆ ಮಾಡಿಕೊಟ್ಟ ಮುಸ್ಲಿಂ ತಂದೆ

1 min read
Spread the love

ಮಹಾರಾಷ್ಟ್ರ: ತಂದೆ-ತಾಯಿಯನ್ನ ಕಳೆದುಕೊಂಡು ಅನಾಥವಾಗಿದ್ದ ಇಬ್ಬರು ಹೆಣ್ಣು ಮಕ್ಕಳನ್ನ ಸಾಕಿ-ಸಲುಹಿದ ವ್ಯಕ್ತಿಯೋರ್ವ ಇಬ್ಬರ ಮದುವೆಯನ್ನ ಹಿಂದೂ ಧಾರ್ಮಿಕ ರೀತಿಯಲ್ಲಿಯೇ ಮಾಡಿ, ಕಣ್ನೀರಿಡುತ್ತ ಬಿಳ್ಕೋಟ್ಟಿರುವ ಪ್ರಸಂಗ ನಡೆದಿದೆ.

ಮಹಾರಾಷ್ಟ್ರದ ಅಹಮದ್ ನಗರ ಬಳಿಯ ಬೋದೆಗಾಂವ್ ನ ಬಾಬುಬಾಯಿ ಪಠಾಣ ಎಂಬಾತನೇ ಭಾರತದ ಸಂಸ್ಕೃತಿಯನ್ನ ಮೈಗೂಡಿಸಿಕೊಂಡವರು. ಇಬ್ಬರು ಹೆಣ್ಣುಮಕ್ಕಳನ್ನ ಮದುವೆ ಧಿರಿಸಿನಲ್ಲಿ ಬೀಳ್ಕೋಡುವ ಪೋಟೋಗಳು ವೈರಲ್ ಆಗಿದ್ದು, ಎಲ್ಲರ ಮನಸ್ಸನ್ನ ಗೆದ್ದಿವೆ.

ಬಾಬುಬಾಯಿ ತಾನೂ ಮುಸ್ಲಿಂ ಅಂತಾಗಲಿ, ಈ ಮಕ್ಕಳು ಹಿಂದೂಗಳು ಅಂತಾಗಲಿ ಅಂದುಕೊಳ್ಳದೇ ನಡೆದುಕೊಂಡಿದ್ದು, ಭಾರತೀಯ ಮುಸ್ಲಿಂರ ಮನಸ್ಥಿತಿಯನ್ನ ತೋರಿಸತ್ತೆ. ತಾನೂ ಮುಸ್ಲಿಂನಾದರೂ, ಹೆಣ್ಣು ಮಕ್ಕಳ ಭಾವನೆಗೆ ತೊಂದರೆಯಾಗದಂತೆ ಅವರದ್ದೇ ರೀತಿಯಲ್ಲಿ ಧಾರೆಯೆರೆದು ಕಳಿಸಿದ್ದು, ಮಾನವೀಯ ಮೌಲ್ಯವನ್ನ ಹೆಚ್ಚಿಸುವಂತಿದೆ.


Spread the love

Leave a Reply

Your email address will not be published. Required fields are marked *