ಧಾರವಾಡ ಗ್ರಾಮೀಣ ಭಾಗದಲ್ಲಿ ಮೂರು ಪಿಯು ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್…!

ಬೆಂಗಳೂರು: ಸರಕಾರಿ ಪ್ರೌಢಶಾಲೆಗಳನ್ನ ಉನ್ನತೀಕರಿಸಿ ಹೊಸದಾಗಿ ಪದವಿ ಪೂರ್ವ ಕಾಲೇಜುಗಳನ್ನ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದ್ದು, ಪ್ರಸಕ್ತ ವರ್ಷದಿಂದ ಧಾರವಾಡದ ಮೂರು ಕಡೆ ಪಿಯು ಕಾಲೇಜು ಆರಂಭಗೊಳ್ಳಲಿದೆ.

ಸರಕಾರಿ ಶಾಲೆಗಳಲ್ಲಿರುವ ಮೂಲಭೂತ ಸೌಲಭ್ಯ ಮತ್ತು ಉಪನ್ಯಾಸಕರ ಸೇವೆಯನ್ನ ಸೂಕ್ತವಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿ, ಹೊಸದಾಗಿ ಕಾಲೇಜುಗಳಿಗೆ ಅವಕಾಶವನ್ನ ನೀಡಿದೆ.
ಈ ಪೈಕಿ ಧಾರವಾಡ ತಾಲೂಕಿನ ಶಿವಳ್ಳಿ, ಯಾದವಾಡ ಮತ್ತು ಮಾದನಬಾವಿಯಲ್ಲಿ ಪ್ರಸಕ್ತ ವರ್ಷದಿಂದ ಪಿಯು ಮೊದಲ ವರ್ಷ ಆರಂಭಗೊಳ್ಳಲಿದೆ.

ಗ್ರಾಮೀಣ ಭಾಗದಲ್ಲಿ ಪದವಿಪೂರ್ವ ಕಾಲೇಜು ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಕೊರೋನಾದಂತ ಸಾಂಕ್ರಾಮಿಕ ರೋಗದಿಂದ ಶಿಕ್ಷಣ ವಂಚಿತರಾಗುವುದನ್ನ ಸ್ಥಳೀಯವಾಗಿಯೇ ಕಾಲೇಜ್ ಆರಂಭಿಸಿ, ತಡೆಯುವ ನಿಟ್ಟಿನಲ್ಲಿಯೂ ಸರಕಾರ ಯೋಚಿಸಿದಂತಿದೆ.