ಯುವ ರೈತನ ಬಲಿ ಪಡೆದ ಹೆಸ್ಕಾಂ ನಿರ್ಲಕ್ಷ್ಯ: ನಲುಗಿದ ಗ್ರಾಮ
1 min readಹುಬ್ಬಳ್ಳಿ: ಲಾರಿಗೆ ಸಿಲುಕಿ ಕಟ್ ಆಗಿದ್ದ ವಿದ್ಯುತ್ ತಂತಿಯನ್ನ ಸರಿ ಮಾಡದ ಪರಿಣಾಮ ರೈತನೋರ್ವನಿಗೆ ತಗುಲಿ ಸಾವಿಗೀಡಾದ ಘಟನೆ ವರೂರು ಬಳಿ ಸಂಭವಿಸಿದೆ.
ನಾಗರಾಜ ಮಾಯಣ್ಣನವರ ಎಂಬ ರೈತನೇ ಸಾವಿಗೀಡಾಗಿದ್ದು, ಜಮೀನಿಗೆ ಹೋಗಿ ಬರುವಾಗ ದುರ್ಘಟನೆ ನಡೆದಿದೆ. ರವಿವಾರವಾಗಿದ್ದರಿಂದ ಜಮೀನಿನಲ್ಲಿ ಕಾರ್ಯನಿರ್ವಹಿಸಲು ತೆರಳಿದ್ದ, ಮಂಜುನಾಥ, ವಿದ್ಯುತ್ ತಂತಿಯನ್ನ ನೋಡಿಲ್ಲ. ತಂತಿ ಕಟ್ ಆಗಿರುವ ಬಗ್ಗೆ ದೂರು ಹೋದರೂ, ಸಂಜೆವರೆಗೆ ಯಾರೂ ಅದನ್ನ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಮಂಜುನಾಥ ವಿದ್ಯುತ್ ತಗುಲಿ ಅದೇ ಜಾಗದಲ್ಲಿ ಪ್ರಾಣವನ್ನ ಬಿಟ್ಟಿದ್ದು, ಘಟನೆಯ ಬಗ್ಗೆ ಮಾಹಿತಿ ದೊರೆತ ನಂತರ ನೂರಾರೂ ಗ್ರಾಮಸ್ಥರು ಅಲ್ಲಿ ಜಮಾಯಿಸಿದ್ದರು. ಹೆಸ್ಕಾಂ ಅಧಿಕಾರಿಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.