ಹೆಲಿಕ್ಯಾಪ್ಟರ್ ಸಂಕಷ್ಟ: ಅವತ್ತು ಮಾಡಿದ ತಪ್ಪಿಗೆ ಇಂದು ಪಶ್ಚಾತಾಪ..!
1 min readಹಾವೇರಿ: ಯಾವ ಭಾವನೆಯನ್ನ ಹೊಂದಿ ನೂರಾರೂ ಕಾಲ ಭಕ್ತ ಸಮೂಹ ದೇವರಿಗೆ ನಡೆದುಕೊಂಡು ಬಂದಿತ್ತೋ, ಅದನ್ನ ಮುರಿದು 2017ರಲ್ಲಿ ದರ್ಶನ ಪಡೆದಿದ್ದ ಅಂದಿನ ಕಾಂಗ್ರೆಸ್ ಮುಖಂಡ ಹಾಗೂ ಇಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಶಾಪ ವಿಮೋಚನೆಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಾಪದಿಂದ ವಿಮುಕ್ತಿ ಹೊಂದುವ ಭರವಸೆಯನ್ನಿಟ್ಟುಕೊಂಡಿದ್ದು, ರುದ್ರಸ್ನಾನ ವಿಧಿ, ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆಯನ್ನ ನಡೆಸಲಿದ್ದಾರೆ. ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಆಲಿಸಲು 2017ರಲ್ಲಿ ಹೆಲಿಕ್ಯಾಪ್ಟರ್ ಮೂಲಕ ಮೈಲಾರಕ್ಕೆ ಡಿಕೆಶಿ ಆಗಮಿಸಿದ್ದರು. ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾಯ್ದು ಹೋಗಿದ್ದರಿಂದ ಸಂಕಷ್ಟಕ್ಕೆ ಒಳಗಾಗಿದ್ದ ಡಿಕೆಶಿ ಒಳಗಾಗಿದ್ದರೆಂದು ಹೇಳಲಾಗುತ್ತಿದೆ.
ಹೆಲಿಕ್ಯಾಪ್ಟರ್ ಮೂಲಕ ಮೈಲಾರಕ್ಕೆ ಬಂದು ಹೋದ ಮೇಲೆ ಇಡಿ ಸಂಕಷ್ಟ ಹಾಗೂ ಜೈಲುವಾಸ ಅನುಭವಿಸಿದ್ದ ಡಿಕೆಶಿ, ಇಂದು ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಪೂಜೆ ಮಾಡುವ ಮೂಲಕ ಸಂಕಷ್ಟದಿಂದ ದೂರಾಗುವ ನಂಬಿಕೆಯನ್ನ ಹೊಂದಿದ್ದಾರೆ.