ಜ್ಞಾನದ ಪ್ರೀತಿಯೂ.. ಹೂ ಮಳೆಯೂ.. ಹೆಬಸೂರ ಶಾಲೆಯೂ..!
1 min readಹುಬ್ಬಳ್ಳಿ: ಆ ಶಾಲೆಯ ಅಂಗಳದಲ್ಲಿ ವಿದ್ಯಾರ್ಥಿಗಳ ಕಲರವ ಮಾಯವಾಗಿ ಒಂಬತ್ತು ತಿಂಗಳು ಕಳೆದಿದ್ದವು. ಹೊಯ್ಯ.. ಲೇ.. ಹಿಂಗ್ಯಾಕೋ.. ಸುಮ್ಮನ್ ಕೂಡೋ.. ಆಕೀಗಿ ಅಲ್ಲೇ ಕೂಡಾಕ್ ಹೇಳ್.. ಇಂತಹ ಶಬ್ದಗಳು ಕೂಡಾ ಮರೆತು ಹೋದ ಅನುಭವವನ್ನ ಮತ್ತೆ ಇಂದು ಮರಕಳಿಸುವಂತಹ ಅಮೋಘ ಕ್ಷಣವನ್ನ ಎಲ್ಲರೂ ಪ್ರೀತಿಯಿಂದ ನೆರವೇರಿಸಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾಗಮ ಪ್ರಾರಂಭೋತ್ಸವದಲ್ಲಿ ವಿಭಿನ್ನವಾಗಿ ನಡೆಯಿತು.
ವಿದ್ಯಾರ್ಥಿನಿಯರನ್ನ ಹಾಗೂ ಶಿಕ್ಷಕರನ್ನು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಅನುಸಾರ ಹೂ ಗುಚ್ಛ ನೀಡಿ ಚಾಕಲೇಟ ಕೊಟ್ಟು ಪುಷ್ಪಾರ್ಚನೆಗೈದು ಸ್ಯಾನಿಟೈಸ್ ಥರ್ಮಲ್ ಸ್ಕ್ಯಾನಿಂಗ್ ನೊಂದಿಗೆ ನಡೆಸಲಾಯಿತು.
ಎಸ್.ಡಿ.ಎಂ.ಸಿ ಪದಾಧಿಕಾರಿಗಳಾದ ಲಾಡಸಾಬ ಶೇಖಸನದಿ, ಬಿ.ಎಫ್. ಭೂಮಣ್ಣವರ, ಕಾವೇರಿ ಅಕ್ಕಿ ,ಆರ್.ವಾಯ್.ಬಾರ್ಕೇರ, ಮುಖ್ಯ ಶಿಕ್ಷಕ ಎಸ್.ಎಲ್.ಬೆಟಗೇರಿ, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಸಿ.ಆರ್.ಪಿ ದುರಗೇಶ ಮಾದರ, ದೇವೇಂದ್ರ ಪತ್ತಾರ, ಲತಾ ಗ್ರಾಮಪುರೋಹಿತ, ಎಂ.ಎನ್.ಮಾಡಳ್ಳಿ, ಎಸ್.ಜಿ.ಕಂಬಳಿ, ಎಸ್.ಎಸ್.ಮಡಿವಾಳರ, ಡಿ.ಎಸ್.ಕೊರಗರ, ಸುಧಾ.ಕೊಣ್ಣೂರ ಉಪಸ್ಥಿತರಿದ್ದರು