Karnataka Voice

Latest Kannada News

ಸರಕಾರಿ ಶಾಲೆಯಲ್ಲಿ “ಹಸಿರು ಪಡೆಯಿಂದ ಹಸಿರೇ ಉಸಿರು”

Spread the love

ಹುಬ್ಬಳ್ಳಿ:  ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಧಾರವಾಡ ಸಾ.ಶಿ.ಇ.ಧಾರವಾಡ ಅಡಿಯಲ್ಲಿ ರಾಷ್ಟ್ರೀಯ ಹಸಿರು ಪಡೆ- ಹಸಿರೇ ಉಸಿರು ವಿನೂತನ ಕಾರ್ಯಕ್ರಮ ನಡೆಯಿತು.

ನಿಸರ್ಗ ಇಕೋ ಕ್ಲಬ್ ಮಕ್ಕಳೊಂದಿಗೆ ಬಿಆರ್ ಪಿ ಎಂ.ವಾಯ್.ಇಂಗಳೇಶ್ವರ, ಸಿಆರ್ ಪಿ ದುರ್ಗೇಶ ಮಾದರ ಇವರ ಮಾರ್ಗದರ್ಶನದಲ್ಲಿ  ಮುಖ್ಯೋದ್ಯಾಪಕಿ  ಎಸ್. ಎಲ್. ಬೆಟಗೇರಿ,  ಹಿರಿಯ ಶಿಕ್ಷಕ ಅಶೋಕ ಎಮ್.ಸಜ್ಜನ, ದೇವೇಂದ್ರ ಪತ್ತಾರ, ಗುರುಮಾತೆಯರಾದ ಡಿ.ಎಸ್.ಕೊರಗರ, ಲತಾ ಗ್ರಾಮಪುರೋಹಿತ, ಎಂ.ಎಂ.ಮಾಡೊಳ್ಳಿ, ಎಸ್.ಜಿ.ಕಂಬಳಿ, ಎಸ್.ಎಸ್.ಮಡಿವಾಳರ, ಸುಧಾ ಕೊಣ್ಣೂರ ಉಪಸ್ಥಿತಿಯಲ್ಲಿ ನಡೆಯಿತು.

ಕೊರೋನಾ ಮುಂಜಾಗೃತಾ ಕ್ರಮಗಳು ಮನೆಗೊಂದು ಮರ ಊರಿಗೊಂದು ವನ ಪರಿಸರ ಉಳಿಸಿ ಪರಿಸರ ಬೆಳೆಸಿ ಪರಿಸರ ಸಂರಕ್ಷಣೆ ಜಲ ಮಾಲಿನ್ಯ ವಾಯು ಮಾಲಿನ್ಯ ಶಬ್ದ ಮಾಲಿನ್ಯ ಮೊಬೈಲ್ ಫೋನ್ ಮಾಲಿನ್ಯ ಒಣ ಕಸ ಹಸಿ ಕಸ ಮುಂತಾದ ಪರಿಸರ ಸಂರಕ್ಷಣಾ ಕ್ರಮಗಳನ್ನು ಚರ್ಚಾತ್ಮಕವಾಗಿ ನಡೆಸಲಾಯಿತು.


Spread the love

Leave a Reply

Your email address will not be published. Required fields are marked *