ಹೆಬಸೂರಲ್ಲಿ ‘ಸಂಗೋಳ್ಳಿ ರಾಯಣ್ಣ” ಪ್ರತಿಮೆ ಸತ್ಯ-ಮಿತ್ಯ: ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವುದು ತಪ್ಪೆ…!?
1 min read2019ರಲ್ಲಿ ನೀಡಿದ ಆದೇಶ ಪ್ರತಿಯನ್ನ ವೈರಲ್ ಮಾಡಲಾಗುತ್ತಿದೆ ಹೊರತಾಗಿ, ಕೆಲಸ ನಿಲ್ಲಿಸುವಂತೆ 2020ರಲ್ಲಿ ನೀಡಿದ ನೋಟಿಸ್ ಬಗ್ಗೆ ಯಾರೂ ಚಕಾರವೆತ್ತದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ
ಹುಬ್ಬಳ್ಳಿ: ತಾಲೂಕಿನ ಹೆಬಸೂರ ಗ್ರಾಮಕ್ಕೆ ಅಂಟಿಕೊಂಟಿರುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನ ನಿಲ್ಲಿಸುವ ಸಂಬಂಧವನ್ನ ಗ್ರಾಮದಲ್ಲಿ ಗೊಂದಲ ಉಂಟಾಗಿದ್ದು, ಅದೀಗ ರಾಜಕೀಯವನ್ನ ಪಡೆದುಕೊಂಡಿದೆ.
ಹೆಬಸೂರ ಗ್ರಾಮ ಪಂಚಾಯತಿಯೂ ಡಿಸೆಂಬರ್ 10-2019ರಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸಮಿತಿಯು ಕೇಳಿದ ಮನವಿಗೆ ಸ್ಪಂಧಿಸಿ, ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವನ್ನ ನೀಡಲಾಗಿತ್ತಾದರೂ, ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆಯನ್ನ ನೀಡಿತ್ತು. ಆದರೆ, ಆಗ ಮೂರ್ತಿ ಸ್ಥಾಪನೆ ಆಗಲೇ ಇಲ್ಲ.
ಇದಾದ ನಂತರ ಅಕ್ಟೋಬರ್ 23- 2020ರಲ್ಲಿ ಅದೇ ಹೆಬಸೂರಿನ ಗ್ರಾಮ ಪಂಚಾಯತಿಯು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವಕ ಮಂಡಳಕ್ಕೆ ನೋಟಿಸ್ ನ್ನ ನೀಡಿತ್ತು. ಅದರಲ್ಲಿ ಸ್ಪಷ್ಟವಾಗಿ ವಿವರವನ್ನ ನೀಡಲಾಗಿತ್ತು. ನೋಟಿಸ್ ಪ್ರಕಾರ, ‘ಮೂರ್ತಿ ಸ್ಥಾಪನೆಗೆ ನೀಡಿರುವ ಜಾಗವೂ ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಬರುತ್ತಿದ್ದು, ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸಾರ್ವಜನಿಕ ಜಾಗೆಯಲ್ಲಿ ಯಾವುದೇ ಮೂರ್ತಿಯನ್ನ ನಿಲ್ಲಿಸಬಾರದೆಂದು ಆದೇಶವಿದೆ. ಆ ಹಿನ್ನೆಲೆಯಲ್ಲಿ ತಕ್ಷಣವೇ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಕೆಲಸವನ್ನ ನಿಲ್ಲಿಸಬೇಕೆಂದು ನೋಟಿಸ್ ನೀಡಲಾಗಿತ್ತು.
ಇದೇಲ್ಲ ನಡೆದು ವರ್ಷಗಳು ಕಳೆಯುತ್ತ ಬಂದ ಸಮಯದಲ್ಲಿಯೇ ಮೂರ್ತಿಯನ್ನ ತಂದಿಟ್ಟು, ಇದೀಗ ಪಂಚಾಯತಿಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕೆಲವು ಪ್ರಮುಖರು ಹೋರಾಟದ ನೆಪದಲ್ಲಿ ಜಾತಿ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಯಾವುದೇ ಮೂರ್ತಿಗಳನ್ನ ನಿಲ್ಲಿಸಬಾರದೆಂಬ ಸುಪ್ರೀಂಕೋರ್ಟನ ಆದೇಶವನ್ನ ಉಲ್ಲಂಘನೆ ಮಾಡುವುದು ಸೂಕ್ತವೇ ಎಂಬ ಪ್ರಶ್ನೆಯೂ ಮೂಡತೊಡಗಿವೆ.
ಪ್ರಕರಣವೂ ಹೆಬಸೂರ ಗ್ರಾಮದಲ್ಲಿ ಹಲವು ಗೊಂದಲಗಳನ್ನ ಮೂಡಿಸುತ್ತಿದ್ದು, ಕೆಲವರು ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ಕಾನೂನನ್ನ ಗಾಳಿಗೆ ತೂರಲು ಮುಂದಾಗಿದ್ದಾರೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.