ಹುಬ್ಬಳ್ಳಿ-ಹೆಬ್ಬಳ್ಳಿ ಬಸ್ ಕಮರಿಗೆ: ಬೆಳ್ಳಂಬೆಳಿಗ್ಗೆ ತಪ್ಪಿದ ಅನಾಹುತ
ಹುಬ್ಬಳ್ಳಿ: ಇಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಕಮರಿಗೆ ಜಾರಿದ್ದು, ದೊಡ್ಡದೊಂದು ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಕೆಲವೇ ನಿಮಿಷಗಳ ಹಿಂದೆ ಹಿರೇಹಳ್ಳದ ಸಮೀಪ ನಡೆದಿದೆ.
ಸುಮಾರು 10 ಪ್ರಯಾಣಿಕರಿದ್ದ ಬಸ್ ಎದುರಿಗೆ ಕುರಿಯನ್ನ ಹೇರಿಕೊಂಡು ಬರುತ್ತಿದ್ದ ವಾಹನ ಮುಂದೆ ಬಂದಾಗ, ಪಾಟಾ ಕಟ್ ಆಗಿ ಕಮರಿಗೆ ತಿರುವಿದೆ. ಚಾಲಕನ ಜಾಣಾಕ್ಷತನದಿಂದ ಬ್ರೇಕ್ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಕಮರಿಗೆ ಬೀಳದಂತಾಗಿ, ಅನಾಹುತ ತಪ್ಪಿದೆ.
ಬಸ್ ಎದುರಿಗೆ ಬರುತ್ತಿದ್ದ ವಾಹನದವರು ಇದನ್ನ ನೋಡಿ ಗಾಬರಿಯಾಗಿ, ಅವರ ವಾಹನವೂ ಸ್ವಲ್ಪ ರಸ್ತೆಯನ್ನ ಬಿಟ್ಟು ಹೋಗಿದೆ.
ಹೆಬ್ಬಳ್ಳಿ-ಹುಬ್ಬಳ್ಳಿ ರಸ್ತೆಯನ್ನ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ರಸ್ತೆಯ ಅಂಚಿನಲ್ಲಿ ತೆಗ್ಗು ಇರುವುದರಿಂದ ವಾಹನಗಳು ಸೈಡ್ ತೆಗೆದುಕೊಳ್ಳುವಾಗ ಕಮರಿಗೆ ಬೀಳುವಂತಹ ಸ್ಥಿತಿಯಿದೆ.
ಕೆಲವೇ ದಿನಗಳ ಹಿಂದೆಯೂ ಈ ರಸ್ತೆಯ ನಿರ್ಮಾಣ ಮಾಡುವಾಗಲೂ ಮೊದಲಿನ ತಪ್ಪುಗಳನ್ನೇ ಮುಂದುವರೆಸಿಕೊಂಡು ಹೋಗಿದ್ದು, ಈ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.