ಹುಬ್ಬಳ್ಳಿ- ಹೆಬ್ಬಳ್ಳಿ ರಸ್ತೆ ಬಂದ್: ಆ ದಾರಿ ಸಂಜೆವರೆಗೂ ಓಪನ್ ಆಗಲ್ಲಾ…!

ಧಾರವಾಡ: ತಾಲೂಕಿನ ಹೆಬ್ಬಳ್ಳಿಯಿಂದ ಹುಬ್ಬಳ್ಳಿಗೆ ಹೋಗುವ ಪ್ರಮುಖ ರಸ್ತೆಯೂ ಸಂಜೆ ಆರು ಗಂಟೆಯವರೆಗೂ ಬಂದ್ ಮಾಡಲಾಗಿದೆ. ಪ್ರಮುಖವಾಗಿ ರೇಲ್ವೆ ಹಳಿಯ ಕಾರ್ಯ ನಡೆದಿರುವುದರಿಂದ ಯಾವುದೇ ಥರದ ವಾಹನಗಳು ಸಂಚರಿಸದಂತೆ ತಡೆ ಹಿಡಿಯಲಾಗಿದೆ.
ಹುಬ್ಬಳ್ಳಿ ತಾಲೂಕಿನ ಉಣಕಲ್ ಸಾಯಿ ನಗರದ ಬಳಿಯಿರುವ ರೇಲ್ವೆ ಸೇತುವೆ ಬಳಿಯಿರುವ ರೇಲ್ವೆ ಹಳಿಯಲ್ಲಿ ಕಾಮಗಾರಿ ನಡೆದಿದೆ. ಬೆಳಿಗ್ಗೆಯಿಂದಲೇ ಆರಂಭಗೊಂಡಿರುವ ಕಾಮಗಾರಿಯಲ್ಲಿ ನೂರಾರೂ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆಯವರೆಗೆ ಕಾಮಗಾರಿ ಮುಗಿಯುವ ಸಾಧ್ಯತೆಯಿದೆ. ಹೀಗಾಗಿ ಸಂಜೆ ಆರು ಗಂಟೆಯವರೆಗೆ ರಸ್ತೆ ಸಂಚಾರವನ್ನ ಸಂಪೂರ್ಣ ಬಂದ್ ಮಾಡಲಾಗಿದೆ.
ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ ಮೊರಬ ಸೇರಿದಂತೆ ಹಲವು ಗ್ರಾಮದವರು ಇದೇ ರಸ್ತೆಯ ಮೂಲಕ ಸಂಚಾರ ಮಾಡುತ್ತಿದ್ದರು. ಅವರೆಲ್ಲರಿಗೂ ಇಂದು ತೊಂದರೆಯಾಗಲಿದೆ. ಶಿವಳ್ಳಿ ಬಳಿ ಇನ್ನೊಂದು ರಸ್ತೆಯಿದ್ದು, ಆ ಮೂಲಕ ತೆರಳಬಹುದಾಗಿದೆ. ಭಾರೀ ವಾಹನ ಈ ರಸ್ತೆಯ ಮೂಲಕ ತೆರಳಲು ಅಸಾಧ್ಯ.
ರೇಲ್ವೆ ಇಲಾಖೆ ಉಣಕಲ್ ಕ್ರಾಸ್ ಬಳಿಯೇ ರಸ್ತೆಯನ್ನ ಬಂದ್ ಮಾಡಿದ್ದಾರೆ. ಇದರಿಂದ ಬಸ್ ಸಂಚಾರದಲ್ಲೂ ಸಾಕಷ್ಟು ವ್ಯತ್ಯಾಸ ಆಗಲಿದೆ.