ಹೆಬ್ಬಳ್ಳಿ ಕಳ್ಳನನ್ನ ಬಂಧಿಸಿದ ಧಾರವಾಡ ಪೊಲೀಸರು- 123 ಗ್ರಾಂ ಚಿನ್ನ ವಶ…
1 min readಧಾರವಾಡ: ಪರವೂರಿಗೆ ಹೋಗುವ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ದೇಶಪಾಂಡೆ ಆಸ್ಪತ್ರೆ ಬಳಿಯ ನಿವಾಸಿ 29 ವಯಸ್ಸಿನ ಮಲ್ಲಯ್ಯ ಅಲಿಯಾಸ್ ಬೇವಿನತಪ್ಪಲ ಬಸಯ್ಯ ಮಠಪತಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 556600 ಮೌಲ್ಯದ 123.8 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಮೂರು ಕಳ್ಳತನ ಪ್ರಕರಣಗಳು ಹೊರಬಿದ್ದಿವೆ.
ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ತಳವಾರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ಆರೋಪಿತರ ಪತ್ತೆ ಕುರಿತು ವಿಶೇಷ ತಂಡ ರಚಿಸಲಾಗಿತ್ತು. ಉಮೇಶಗೌಡ ಎಂ. ಪಾಟೀಲ ಪಿಎಸ್‍ಐ (ಅಪರಾಧ ವಿಭಾಗ), ಸಚೀನಕುಮಾರ ದಾಸರಡ್ಡಿ ಪಿಎಸ್‍ಐ (ಕಾ ವ ಸು), ಎಲ್. ಕೆ ಕೊಡಬಾಳ ಮ.ಪಿ.ಎಸ್.ಐ, ವಾಯ್. ಡಿ ಮೇದಾರ .ಪಿ.ಎಸ್.ಐ (ಹೆಚ್ಚುವರಿ) ಹಾಗೂ ಕೆ.ಎನ್ ನೆಲಗುಡ್ಡ ಎಎಸ್‍ಐ, ಹೆಚ್.ಸಿ-1577 ಎಸ್.ವಿ ನೀಲಣ್ಣವರ, ಹೆಚ್.ಸಿ-1663 ಸಿ.ಟಿ ನಡುವಿನಮನಿ, ಸಿ.ಪಿ.ಸಿ-2322 ಬಿ. ವಿ ಸಣ್ಣಪ್ಪನವರ, ಸಿ.ಪಿ.ಸಿ-2923 ಶ್ರೀಕಾಂತ ತಲ್ಲೂರ, ಸಿ.ಪಿ.ಸಿ-2937 ಶ್ರೀ ಹೆಚ್. ಬಿ ವಡ್ಡರ ರವರು ಹಾಗೂ ತನಿಖಾ ಸಹಾಯಕರಾದ ಸಿ.ಪಿ.ಸಿ-2468 ಶ್ರೀ ಹೆಚ್.ವೈ ಜೆಟ್ಟೆಣ್ಣವರ, ಸಿ.ಪಿ.ಸಿ2685 ಮಂಜುನಾಥ ಎಸ್ ಗೊರಾಬಾಳ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.