ಹೆಬ್ಬಳ್ಳಿಯಲ್ಲಿ ಭಗತಸಿಂಗ್ ಯುವಕ ಮಂಡಳ ರಾತ್ರೋರಾತ್ರಿ ಏನೂ ಮಾಡಿದೆ ಗೊತ್ತಾ..?
ಧಾರವಾಡ: ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ ಜನ್ಮದಿನಾಚರಣೆಯನ್ನ ತಾಲೂಕಿ ಹೆಬ್ಬಳ್ಳಿ ಗ್ರಾಮದ ಭಗತ್ ಸಿಂಗ್ ಯುವಕ ಮಂಡಳ ಸರಳವಾಗಿ ಮನಸೆಳೆಯುವ ರೀತಿಯಲ್ಲಿ ಆಚರಣೆ ಮಾಡಿದ್ರು.
ಯುವಕರಲ್ಲಿ ಭಗತಸಿಂಗ್ ವಿದ್ಯಾರ್ಥಿ ಜೀವನದಲ್ಲಿ ಅಸಹಕಾರ ಚಳುವಳಿಯನ್ನ ಆರಂಭಿಸಿದ್ದರು. ಹೀಗಾಗಿಯೇ ಯುವ ಸಮೂಹದಲ್ಲಿ ಭಗತಸಿಂಗ್ ಹೆಸರು ಸಂಚಲನ ಮೂಡಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಯ 111ನೇ ಜನ್ಮದಿನಾಚರಣೆಯನ್ನ ಆಚರಿಸಲಾಯಿತು.
ಭಗತ್ ಸಿಂಗ್ ಯುವಕ ಮಂಡಳಿ ಅಧ್ಯಕ್ಷ ಬಸವರಾಜ ಸುಂಕದ, ಸಚಿನ್ ವಾಲಿ, ಸಂಜು ಮೊರಬದ, ವೀರೇಶ ಚುಳಕಿ, ಮಹಾಂತೇಶ ಸುಂಕದ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನ ಯುವಕರು ಭಗತಸಿಂಗ್ ಅವರ ಜೀವನ ಚರಿತ್ರೆಯನ್ನ ಅರಿತುಕೊಂಡು, ದೇಶಪ್ರೇಮವನ್ನ ಬೆಳೆಸಿಕೊಳ್ಳಬೇಕೆಂದು ಯುವಕ ಮಂಡಳದವರು ಯುವಸಮೂಹಕ್ಕೆ ಕರೆ ನೀಡಿದ್ದಾರೆ.