ಹುಬ್ಬಳ್ಳಿ ಹುಡುಗ ಲಕ್ಷ್ಮೀ ಹೆಬ್ಬಾಳ್ಕರ ಅಳಿಯ: ನಿಶ್ಚಿತಾರ್ಥದ ಎಕ್ಸಕ್ಲೂಸಿವ್ ಪೋಟೊಗಳಿವೆ
ಹುಬ್ಬಳ್ಳಿ: ಬೆಳಗಾವಿ ಗ್ರಾಮೀಣ ಶಾಸಕಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ ತಮ್ಮ ಪುತ್ರಿಯನ್ನ ಹುಬ್ಬಳ್ಳಿಯ ಹುಡುಗನೊಂದಿಗೆ ಮದುವೆ ಮಾಡಲು ನಿಶ್ಚಯ ಮಾಡಿದ್ದು, ಅದನ್ನ ಬೈರಿದೇವರಕೊಪ್ಪದಲ್ಲಿ ಸಾರ್ವಜನಿಕವಾಗಿ ಹೇಳಿಕೊಂಡರು.
ಕಾಂಗ್ರೆಸ್ ನ ಮುಖಂಡರಾಗಿದ್ದ ದಿವಂಗತ ವಿಶ್ವಪ್ರಕಾಶ ಉಳ್ಳಾಗಡ್ಡಿಮಠರ ಪುತ್ರ, ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ರಜತ ಉಳ್ಳಾಗಡ್ಡಿಮಠನೊಂದಿಗೆ ಮದುವೆಗೆ ನಿಶ್ಚಯ ಮಾಡಿದ್ದು, ಈಗಾಗಲೇ ನಿಶ್ವಿತಾರ್ಥವೂ ನಡೆದು ಹೋಗಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರರಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿಯಿದ್ದು, ರಜತ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸುಶ್ಮಿತಾ, ಹೊರದೇಶದಲ್ಲಿ ಕಂಪ್ಯೂಟರ್ ಸೈನ್ಸನಲ್ಲಿ ಉನ್ನತ ಪದವಿ ಪಡೆದಿದ್ದಾರೆ.
ಕೆಲದಿನಗಳ ಹಿಂದೆ ಹುಬ್ಬಳ್ಳಿಯಲ್ಲಿನ ಉಳ್ಳಾಗಡ್ಡಿಮಠರ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥವನ್ನ ಮುಗಿಸಿಕೊಂಡಿದ್ದು, ಕೊರೋನಾ ಹಾವಳಿ ಕಡಿಮೆಯಾದ ತಕ್ಷಣವೇ ಮದುವೆ ದಿನಾಂಕ ನಿರ್ಧಾರವಾಗುವ ಸಾಧ್ಯತೆಯಿದೆ.
ಬೈರಿದೇವರಕೊಪ್ಪದ ನಡೆದ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನ ರಜತಗೆ ಕೊಡುತ್ತಿರುವುದನ್ನ ಹೇಳಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ, ರಜತ ನನ್ನ ಅಳಿಯನಲ್ಲ, ಮಗನೆಂದು ಹೇಳಿದರು. ತಂದೆಯನ್ನ ಕಳೆದುಕೊಂಡು ಧೈರ್ಯದಿಂದ ಮುನ್ನಡೆಯುತ್ತಿರುವ ರಜತನಿಗೆ ಒಳ್ಳೆಯದಾಗಲಿ ಎನ್ನುತ್ತ, ಜನರ ಆಶೀರ್ವಾದವೂ ಬೇಕು ಎಂದರು.
ಪಕ್ಕದಲ್ಲಿಯೇ ಕುಳಿತಿದ್ದ ರಜತ, ಜನರಿಗೆ ಕೈಮುಗಿದು ನಸುನಕ್ಕರು. ಯಾವುದಕ್ಕೂ ‘ವಿಶ್ವಣ್ಣ’ನ ಮಗನಿಗೆ ಒಳ್ಳೆಯದಾಗಲಿ ಎನ್ನುವುದೇ ಎಲ್ಲರ ಹಾರೈಕೆ.
                      
                      
                      
                      
                      
                        
