ಹೃದಯಾಘಾತದಿಂದ ಶಿಕ್ಷಕ ಸಾವು- ಈಗಿದ್ದವರು ಈಗಿಲ್ಲದ ಸ್ಥಿತಿ
1 min readದಾವಣಗೆರೆ: ಇತ್ತೀಚೆಗಷ್ಟೇ ಪದೋನ್ನತಿ ಹೊಂದಿ ಪ್ರೌಢಶಾಲೆಗೆ ಹೋಗಿದ್ದ ಶಿಕ್ಷಕರೋರ್ವರು ಇಳಿಸಂಜೆ ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡುತ್ತಲೇ ಕುಳಿತ ಸಮಯದಲ್ಲಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಹೃದಯಾಘಾತದಿಂದ ಹೀಗಾಗಿದೆ ಎಂದು ಗೊತ್ತಾಗಿದೆ.
ಹರಪನಹಳ್ಳಿ ತಾಲೂಕಿನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಎಸ್.ಇನಾಯಿತುಲ್ಲಾ ಎಂಬ ಶಿಕ್ಷಕರೇ ಸಾವಿಗೀಡಾಗಿದ್ದಾರೆ. ಇವರು ಸದ್ಯ ದಾವಣಗೆರೆ ತಾಲೂಕಿನಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹರಪನಹಳ್ಳಿಯಲ್ಲಿದ್ದಾಗಲೂ ಶಿಕ್ಷಕ ಇನಾಯಿತುಲ್ಲಾ, ಸಾರ್ವಜನಿಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ವಿದ್ಯಾರ್ಥಿಗಳಿಗಾಗಿ ಸಾಕ್ಟು ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಿದ್ದರು. ಹೀಗಾಗಿ, ಬಹುತೇಕರಿಗೆ ಪ್ರೀತಿಯ ಶಿಕ್ಷಕರಾಗಿದ್ದರು.
ಹರಿಹರದ ತಮ್ಮ ನಿವಾಸದಲ್ಲಿ ಕುಟುಂಬದವರೊಂದಿಗೆ ಕುಳಿತಾಗಲೇ ಈ ದುರ್ಘಟನೆ ನಡೆದಿದ್ದು, ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಶಿಕ್ಷಕರ ಸಾವುಗಳು ಒಂದಿಲ್ಲಾ ಒಂದು ರೀತಿಯಲ್ಲಿ ನಡೆಯುತ್ತಿರುವುದು ಕೂಡಾ, ಇಲಾಖೆಯಲ್ಲಿ ಬೇಸರ ಮೂಡಿಸುತ್ತಿದೆ.