“ಹು-ಧಾ ಖಾಸಗಿ ಆಸ್ಪತ್ರೆಗಳ ಕಹಾನಿ”- ಹಾರ್ಟ್ ಅಟ್ಯಾಕ್ ಆದ್ರೇ “ಪ್ಯಾಕೇಜ್” ಸಿಸ್ಟಂ ವ್ಯವಹಾರ- ಜನರೇ ಎಚ್ಚೆತ್ತುಕೊಳ್ಳಿ…!!!

ಹುಬ್ಬಳ್ಳಿ: ವಾಣಿಜ್ಯ ನಗರಿಯೂ ಆಗಿರುವ ಹುಬ್ಬಳ್ಳಿ ಮತ್ತು ವಿದ್ಯಾಕಾಶಿ ಎಂದು ಗುರುತಿಸಿಕೊಳ್ಳುವ ಧಾರವಾಡದಲ್ಲಿ ಹೃದಯಾಘಾತವಾದರೇ ಪ್ಯಾಕೇಜ್ ಸಿಸ್ಟಂ ಮಾಡಲಾಗಿದೆ. ಪ್ಯಾಕೇಜ್ ಖರೀದಿಸುವವರೆಗೆ ಕ್ಷಣ ಮಾತ್ರವೂ ಬಿಡದೇ, ಖರೀದಿಸಿದ ಮೇಲೆ ಸಿಗುವುದೇ ವಿರಳ.
ಹೌದು… ಇತ್ತೀಚೆಗೆ ಓರ್ವ ಸರಕಾರಿ ನೌಕರನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಅರಾಮಾಗಿ ಹೋದವರನ್ನ ಭಯ ಬೀಳುವ ರೀತಿಯಲ್ಲಿ ಮಾತನಾಡಿದ್ದಾರೆ. ಇಂಜೆಕ್ಷನ್ ಮಾಡಲೇಬೇಕು, ಹೊರಳಾಡಬೇಡಿ (ಮನೆಯಿಂದ ಅರಾಮಾಗಿ ಬಂದವರಿಗೆ ಹೇಳಿದ್ದು) ಎನ್ನುತ್ತಲೇ ಬರೋಬ್ಬರಿ ಒಂದು ಲಕ್ಷ ಮೂವತ್ತು ಸಾವಿರ ಬಿಲ್ ಮಾಡಿದ್ದಾರೆ. ಇದರಲ್ಲಿ ಎಂಜಿಯೋಗ್ರಾಫಿ ಕೂಡಾ ಸೇರಿದೆ.
ಅಲ್ಲಿಂದ ತೆರಳಿದ ಅವರು ಬೇರೆ ಆಸ್ಪತ್ರೆಗೆ ತೆರಳಿದ್ದಾರೆ. ಒಂದು ಸ್ಟಂಟ್ ಹಾಕಿ ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿಟ್ಟುಕೊಂಡು ಮನೆಗೆ ಕಳಿಸುವಾಗ ಬರೋಬ್ವರಿ ಎರಡೂವರೆ ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ. ಹಾಗಾದರೇ, ಕೇಂದ್ರ ಸರಕಾರ ಸ್ಟಂಟ್ ಬೆಲೆ ನಿರ್ಧಾರ ಮಾಡಿದ ಕಾನೂನು ಎಲ್ಲಿ ಮಾಯವಾಗಿದೆ.
ಹೃದಯಾಘಾತವಾದ ತಕ್ಷಣವೇ ಕೆಲ ಖಾಸಗಿ ಆಸ್ಪತ್ರೆಗೆ ಹೋದರೇ ಅವರನ್ನ ಚೆನ್ನಾಗಿಯೇ ಪ್ಯಾಕೇಜ್ ಪಡೆಯುವ ವಿಧಾನವನ್ನ ಅರಿತುಕೊಂಡಿದ್ದಾರೆ. ಒಳ್ಳೆಯ ಡ್ರೆಸ್, ಚೈನ್, ವಾಚ್, ಐಪೋನ್ ಮೇಲೂ ಪ್ಯಾಕೇಜ್ ದರ ನಿಗದಿಯಾಗತ್ತೆ.
ಐಸಿಯು ದರವಂತೂ ಮುಗಿಲು ಮುಟ್ಟಿ ಮುಂದೆ ದಾರಿಯನ್ನ ಬೆಳೆಸುತ್ತಿದೆ. ಹೃದಯಾಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಯಾಕೆ ಹೆಚ್ಚಾಗುತ್ತಿದೆ ಮತ್ತೂ ಸಾಯುವವರು ಮಧ್ಯಮವರ್ಗ, ಬಡವರು ಹೆಚ್ಚಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ.
ಸಾರ್ವಜನಿಕರು ಸುಖಾಸುಮ್ಮನೆ ಬೇಡದ ಹಾಗೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕಾಳಜಿಯಿಲ್ಲದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಚರ್ಚೆ ಮಾಡುವ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಹಣದ ದಾಹ ಎಲ್ಲಿಗೆ ಮುಟ್ಟಿದೆ ಎಂಬುದನ್ನ ಚಿಂತಿಸಬೇಕಿದೆ.
ಬಡವರಾದವರಿಗೂ ಉತ್ತಮ ಆರೋಗ್ಯ ಸಿಗಬೇಕು. ಆರೋಗ್ಯ ಕೆಟ್ಟಾಗ ಉತ್ತಮ ಚಿಕಿತ್ಸೆಯೂ ಅವರ ಯೋಗ್ಯತೆಗೆ ತಕ್ಕ ಹಾಗೇ ಮಾಡಬೇಕು. ಇದನ್ನ ಅರ್ಥ ಮಾಡಿಸುವುದಕ್ಕೆ ಜನಸಾಮಾನ್ಯರು ಮುಂದಾಗಬೇಕು.
ಹುಬ್ಬಳ್ಳಿ ಧಾರವಾಡದಲ್ಲಿ ಇಪ್ಪತ್ತು ಪರ್ಸೆಂಟ್ ಜನ ಕೂಡಾ ಶ್ರೀಮಂತರಿಲ್ಲ. ಇನ್ನುಳಿದ 80% ಜನರ ಆರೋಗ್ಯಕ್ಕೆ ಸರಕಾರದ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಇಲ್ಲ. ಹಾಗಾಗಿ, ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿಯೂ ಜನರಿಗೆ ಚಿಕಿತ್ಸೆ ಸಿಗುವ ಹಾಗೇ ಮಾಡಿಸುವ ಒತ್ತಡವನ್ನ ಮಧ್ಯಮ ಮತ್ತು ಬಡವರು ಹಾಕಬೇಕು.
ನಮ್ಮ ಮಾತು ಯಾರೂ ಕೇಳ್ತಾರೆ ಎಂದು ಮನೆಯಲ್ಲಿ ಇದ್ದುಬಿಟ್ಟರೇ, ನಿಮ್ಮನ್ನ ಯಾವುದೇ ಭಗವಂತ ಬಂದು ಕಾಪಾಡಲಾರ. ಏಳಿ ಎದ್ದೇಳಿ, ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದಲಾದರೂ ಮೈಕೊಡವಿ ನಿಂತು ಖಾಸಗಿ ಆಸ್ಪತ್ರೆಗೆ ಪಾಠ ಕಲಿಸಿ.