ಹೃದಯಾಘಾತಕ್ಕೆ ಆಯಟ್ಟಿಯ “ಸುರೇಶಣ್ಣ” ಇನ್ನಿಲ್ಲ… ಮಾಜಿ ಸಚಿವ “SPM”ರಿಂದ ಶ್ರದ್ಧಾಂಜಲಿ

ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ್ದ, ಮುಖಂಡರೋರ್ವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ.
ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದ ಸುರೇಶ ಮಡಿವಾಳರ ಎಂಬುವವರೇ ನಿಧನರಾಗಿದ್ದು, ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಉತ್ತಮ ಜೀವನ ನಡೆಸಿದ್ದರು. ಸುರೇಶ ಅವರು ಪದವಿ ಪಡೆದು ಗ್ರಾಮದಲ್ಲಿದ್ದು, ಬದುಕು ಕಟ್ಟಿಕೊಂಡಿದ್ದರು.
ಈ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು, ಪಕ್ಷಕ್ಕೆ ಬಹುದೊಡ್ಡ ನಷ್ಟವಾಗಿದ್ದು, ಮೃತ ಸುರೇಶ ಮಡಿವಾಳರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.