ನವನಗರದ “ಹೆಡ್ ಮಾಸ್ಟರ್” ಸಸ್ಪೆಂಡ್: ಕರ್ನಾಟಕವಾಯ್ಸ್.ಕಾಂ ಇಂಪ್ಯಾಕ್ಟ್…!
1 min readಹುಬ್ಬಳ್ಳಿ: ನವನಗರದ ಸರಕಾರಿ ಶಾಲೆಯಲ್ಲಿಯೇ ಕುಡಿದು ಮಾನಸಿಕವಾಗಿ ಜರ್ಝರಿತಗೊಂಡಂತೆ ನಡೆದುಕೊಳ್ಳುತ್ತಿದ್ದ ಮುಖ್ಯ ಶಿಕ್ಷಕರನ್ನ ಅಮಾನತ್ತು ಮಾಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಆದೇಶ ಹೊರಡಿಸಿದ್ದು, ಕರ್ನಾಟಕವಾಯ್ಸ್.ಕಾಂ ನ ಇಂಪ್ಯಾಕ್ಟ ಆಗಿದೆ.
ಶಾಲೆಯಲ್ಲಿ ಹೆಡ್ ಮಾಸ್ಟರ್ ಹೆಂಗೆ ನಡೆದುಕೊಂಡಿದ್ದಾ ಎಂಬುದನ್ನ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕಿತ್ತು. ಅದರ ವರದಿ ಇಲ್ಲಿದೆ ನೋಡಿ..
ಮುಖ್ಯ ಶಿಕ್ಷಕ ಐ.ಐ.ಮುಲ್ಲಾನವರ ಅಮಾನತ್ತು ಮಾಡಿ, ಡಿಡಿಪಿಐ ಮೋಹನಕುಮಾರ ಹಂಚಾಟೆಯವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಈ ಶಿಕ್ಷಕನೊಂದಿಗೆ ವಾಟ್ಸಾಫ್ ನಲ್ಲಿ ಮುತ್ತಿನ ಸುರಿಮಳೆಗೈಯುವ ಶಿಕ್ಷಕಿಯರ ಬಗ್ಗೆ ಇನ್ನೂ ಕ್ರಮವನ್ನ ಜರುಗಿಸಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯವಾಗಿದೆ.
ಸರಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಕರಾಳ ರತಿ ಕ್ರೀಡೆಗಳು ಈ ಮೂಲಕ ಹೊರಗೆ ಬೀಳುವ ಸಾಧ್ಯತೆಯಿದ್ದು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ. ಇಲ್ಲದಿದ್ದರೇ, ಶಿಕ್ಷಣಾಲಯವನ್ನ ‘ಗೀ.. ಗೀ..” ಸೇರಿಕೊಂಡು ಹಾಳು ಮಾಡುವುದರಲ್ಲಿ ಅಚ್ಚರಿಯಿಲ್ಲ.