ಅತಿಥಿ ಶಿಕ್ಷಕರ, ಅಡುಗೆ ಸಹಾಯಕರ ನೇಮಕಕ್ಕೆ ಲಂಚದ ಬೇಡಿಕೆ- ಲೋಕಾಯುಕ್ತ ಬಲೆಗೆ ಬಿದ್ದ “ಹೆಡ್‌ಮಾಸ್ಟರ್”….

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ
ಇಲ್ಲಿಯೂ ನಿಲ್ಲುತ್ತಿಲ್ಲ ಭ್ರಷ್ಟಾಚಾರ
ಕೊಡಗು: ಲಂಚ ಪಡೆಯುವ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯನೋರ್ವ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಎಂಬ ಗ್ರಾಮದಲ್ಲಿ ನಡೆದಿದೆ.
ಮಾಲ್ದಾರೆ ದಿಡ್ಡಳ್ಳಿ ಆಶ್ರಮ ಶಾಲೆಯ ಹೆಡ್ ಮಾಸ್ಟರ್ ಸಿದ್ಧಲಿಂಗ ಶೆಟ್ಟಿ ಎಂಬುವವರೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ನೇಮಕಕ್ಕೆ 20 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದರಂತೆ.
DYSP ಪ್ರಕಾಶ್ ಕೆ.ಸಿ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಲೋಕೆಶ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು, ಹೆಡ್‌ಮಾಸ್ಟರ್ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.