ಸರಕಾರಿ ಶಾಲೆಯಲ್ಲಿ ‘ಕುಡುಕ ಹೆಡ್ ಮಾಸ್ತರ್’ ಗಮ್ಮತ್ತು: ಮುತ್ತಿನ ಸುರಿಮಳೆಯ ವಾಟ್ಸಾಫ್ ಮೆಸೇಜ್….!

ಹುಬ್ಬಳ್ಳಿ: ಸರಕಾರಿ ಶಾಲೆಗಳನ್ನ ಆರಂಭಿಸಬೇಕೋ ಬೇಡವೋ ಎಂದು ಸರಕಾರಿ ಗೊಂದಲದಲ್ಲಿರುವಾಗಲೇ ನವನಗರದ ಸರಕಾರಿ ಶಾಲೆಯೊಂದರ ಮುಖ್ಯ ಗುರುಗಳು ಶಾಲೆಯಲ್ಲಿಯೇ ಮದ್ಯ ಸೇವನೆ ಮಾಡಿರುವ ಪ್ರಕರಣವೊಂದು ನಡೆದಿದ್ದು, ವೀಡಿಯೋ ವೈರಲ್ ಆಗಿದೆ.
ವೈರಲ್ ಆಗಿರೋ ವೀಡಿಯೋ ಇಲ್ಲಿದೆ ನೋಡಿ..
ನವನಗರದ ಸರಕಾರಿ ಶಾಲೆಯ ಮುಖ್ಯಾಧ್ಯಾಪಕ ಐ.ಐ.ಮುಲ್ಲಾನವರ ಎಂಬುವವರನ್ನ ನೋಡದ ಸ್ಥಿತಿಯಲ್ಲಿ ನೋಡುವಂತಾಗಿದೆ. ಅಷ್ಟೇ ಅಲ್ಲ, ಇದೇ ಶಾಲೆಯಲ್ಲಿರುವವರು ಮುಖ್ಯಾಧ್ಯಾಪಕನೊಂದಿಗೆ ಮುತ್ತಿನ ಬಗ್ಗೆ ಮಾತಾಡಿರೋ ವಾಟ್ಸಾಫ್ ಮೆಸೇಜ್ ಗಳು ಕೂಡಾ ಲೀಕ್ ಆಗಿವೆ.

ಗೀ.. ಗೀ.. ಪದ ಹಾಡುತ್ತಲೇ ಮುತ್ತಿನ ಬಗ್ಗೆ ಮಾತನಾಡುತ್ತಿರುವುದರಿಂದಲೇ ಈ ಶಿಕ್ಷಕ ಮತ್ತೇರಿಸಿಕೊಂಡು ತೇಲಾಡುತ್ತಿದ್ದಾನೆಂದು ಹೇಳಲಾಗುತ್ತಿದೆ. ಇದಕ್ಕೆ ಕಡಿವಾಣವನ್ನ ಶಿಕ್ಷಣ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರಾ.. ಅಥವಾ ವಾಟ್ಸಾಫ್ ಮೆಸೇಜ್ ಗಳು ಬಯಲಿಗೆ ಬರಲಿ ಎಂದು ಕಾಯುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.