“HC ಪುರಾಣಿಕಮಠ ಮೇಲೆ ಹಲ್ಲೆ” ಅಸಲಿ ಸತ್ಯವೇನು: ಎಕ್ಸಕ್ಲೂಸಿವ್ ಸಿಸಿಟಿವಿ ದೃಶ್ಯಗಳು….

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿರುವವರ ಮೇಲೆ ನಡೆದ ಹಲ್ಲೆ ಪ್ರಕರಣದ ಅಸಲಿಯತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಹೊರಬಿದ್ದಿದೆ.
ಸಹದೇವನಗರದ ತಮ್ಮ ಮನೆಯಲ್ಲಿದ್ದ ಸಂಚಾರಿ ಠಾಣೆಯ ಮುಖ್ಯ ಪೇದೆ ಪ್ರಭು ಪುರಾಣಿಕಮಠ ಅವರ ಮೇಲೆ ಹಲ್ಲೆ ಹೇಗೆ ನಡೆಯಿತು ಹಾಗೂ ಪ್ರತಿ ಹಲ್ಲೆ ಹೇಗೆ ನಡೆದಿದೆ. ಇದೇಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ದೃಶ್ಯಗಳು…
ಹೆಡ್ ಕಾನ್ಸಟೇಬಲ್ ಪುರಾಣಿಕಮಠ ಹಾಗೂ ಅವರ ಪತ್ನಿಯ ಮೇಲೆ ನಿರಂತರವಾಗಿ ಇಟ್ಟಿಗೆ ತೂರಾಟ ಆರಂಭವಾಗಿದ್ದರಿಂದ ರೋಸಿ ಹೋಗಿ, ಎದುರಾಳಿ ಭರತೇಶಗೆ ಬಡಿಗೆಯಿಂದ ಹೊಡೆಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.