ಇನ್ಪ್ಲೂಯನ್ಸ್ ಮಾಡಿಸಬೇಡಿ-ಕೆಲಸ ಮಾಡಿ, ನಿಮ್ಮೊಂದಿಗೆ ನಾನಿದ್ದೇನೆ: ಕಮೀಷನರ್ ಲಾಬುರಾಮ್ ಖಡಕ್ ಮಾತು

ಹುಬ್ಬಳ್ಳಿ: ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 39 ಪೇದೆಗಳಿಗೆ ಪ್ರಮೋಷನ್ ನೀಡಲಾಗಿದ್ದು, ಖಾಲಿಯಿರುವ ಠಾಣೆಗಳ ಮಾಹಿತಿಯನ್ನ ಮೊದಲೇ ನೀಡಿ ಎಲ್ಲರಿಗೂ ಬೇರೆ ಬೇರೆ ಠಾಣೆ ನೀಡಲಾಗಿದೆ.
ಧಾರವಾಡದ ಸಂಚಾರಿ ಠಾಣೆ, ವಿದ್ಯಾಗಿರಿ ಠಾಣೆಯು ಸೇರಿದಂತೆ ಹುಬ್ಬಳ್ಳಿ-ಧಾರವಾಡ ಬಹುತೇಕ ಠಾಣೆಗಳಲ್ಲಿ ಪೇದೆಗಳಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ 39 ಸಿಬ್ಬಂದಿಗಳಿಗೆ, ಮುಖ್ಯ ಪೇದೆಗಳಾಗಿ ಪ್ರಮೋಷನ್ ನೀಡುವ ಸಮಯದಲ್ಲಿ, ವಿವಿಧ ಠಾಣೆಗಳಲ್ಲಿನ ಖಾಲಿ ಸ್ಥಳಗಳ ವಿವರಣೆಯನ್ನ ನೀಡಲಾಗಿತ್ತು.
ಈ ಸಮಯದಲ್ಲಿ ಮಾತನಾಡಿರುವ ಪೊಲೀಸ್ ಕಮೀಷನರ್ ಲಾಬುರಾಮ ಅವರು, ಯಾವುದೇ ಕಾರಣಕ್ಕೆ ಅವರಿವರ ಕಡೆಯಿಂದ ಒತ್ತಡ ಹಾಕುವ ಪ್ರಯತ್ನಕ್ಕೆ ಇಳಿಯಬೇಡಿ. ಖಾಲಿಯಿರುವ ಠಾಣೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿ, ನಿಮಗೆ ತೊಂದರೆಯಾದರೇ, ನಾನು ಅದನ್ನ ಬಗೆಹರಿಸುತ್ತೇನೆ ಎಂದು ನೇರವಾಗಿ ಹೇಳಿದರು.
39 ಸಿಬ್ಬಂದಿಗಳು ಖಾಲಿಯಿರುವ ಪೊಲೀಸ್ ಠಾಣೆಗಳನ್ನ ಆಯ್ದುಕೊಂಡು ಕರ್ತವ್ಯ ಹಾಜರಾಗಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ವ್ಯಾಪ್ತಿಯ ಬಹುತೇಕ ಅಧಿಕಾರಿಗಳು ಈ ಸಮಯದಲ್ಲಿ ಹಾಜರಿದ್ದರು.