ಅಪಹರಣಕ್ಕೆ ಒಳಗಾದವನ ಬಿಡುಗಡೆಗೆ ಹಣದ ಬೇಡಿಕೆಯಿಟ್ಟಿದ್ದ ಮೂವರು ಹವಾಲ್ದಾರ್ ಅಮಾನತ್ತು

ರಾಯಚೂರು: ಮಾರಕಾಸ್ತ್ರ ತೋರಿಸಿ ವ್ಯಕ್ತಿಯನ್ನಅಪಹರಿಸಿ ಸಿಕ್ಕಿಬಿದ್ದಿದ್ದ ಪ್ರಕರಣಕ್ಕೀಗ ಹೊಸ ಜೀವ ಬಂದಿದೆ. ಅಪಹರಣಕ್ಕೆ ಒಳಗಾದ ವ್ಯಕ್ತಿಯನ್ನ ಬಿಡುಗಡೆಗೊಳಿಸಲು ಪೊಲೀಸರೇ ಹಣದ ಬೇಡಿಕೆಯಿಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹವಾಲ್ದಾರಗಳನ್ನ ಅಮಾನತ್ತು ಮಾಡಲಾಗಿದೆ.
ರಾಯಚೂರಿನ ಶಕ್ತಿನಗರ ಠಾಣೆಯ ಮೂವರು ಹೆಡ್ ಕಾನ್ಸ್ ಟೇಬಲ್ ಗಳಾದ ಹುಸೇನಸಾಬ ಮುಲ್ಲಾ, ಲಕ್ಷ್ಮಣ, ಖಾದ್ರಿ ಅಮಾನತ್ತಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 18 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಂಡ ನಂತರ ಪೊಲೀಸರ ಪಾತ್ರ ಬಯಲಾಗಿದ್ದು, ರಾಯಚೂರು ಎಸ್ಪಿ ಸಿ.ಬಿ.ವೇದಮೂರ್ತಿ ಭ್ರಷ್ಟರನ್ನಅಮಾನತ್ತು ಮಾಡಿದ್ದಾರೆ.