‘112’ ರಲ್ಲಿ ಡ್ಯೂಟಿ ಮಾಡುವಾಗಲೇ ಪ್ರಾಣಬಿಟ್ಟ ‘ಜಮಾದಾರ’…

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಘಟನೆ
ಸಾವಿರಾರು ಜನರ ನಡುವೆ ನಡೆದ ಅಂತ್ಯಕ್ರಿಯೆ
ಹಾವೇರಿ: ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ ಲೋ ಬಿಪಿಯಿಂದ ಹೆಡ್‌ಕಾನ್ಸಟೇಬಲ್‌ವೊಬ್ಬರು ಸಾವಿಗೀಡಾದ ಘಟನೆ ರಟ್ಟಿಹಳ್ಳಿಯಲ್ಲಿ ಸಂಭವಿಸಿದೆ.
ಮೃತ ಹೆಡ್ ಕಾನ್ಸ್‌ಟೇಬಲ್ ಅವರನ್ನ 48 ವರ್ಷದ ಬಸಪ್ಪ ಮಲ್ಲಾಡದ ಎಂದಿದ್ದು, 112 ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಲೋ ಬಿಪಿಯಾಗಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಮೂಲತಃ ರಾಣೇಬೆನ್ನೂರು ತಾಲ್ಲೂಕಿನ ಹಾರೋಗೊಪ್ಪ ನಿವಾಸಿಯಾಗಿದ್ದು, 26 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಹೆಡ್‌ಕಾನ್ಸಟೇಬಲ್ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳಿಂದ ನಡೆಯಿತು.