ಧಾರವಾಡದ ಹೆಡ್ ಕಾನ್ಸಟೇಬಲ್ ಹುಬ್ಬಳ್ಳಿಯಲ್ಲಿ ಸಾವು….!
1 min readಧಾರವಾಡ: ನಗರದ ಪೆಂಡಾರಗಲ್ಲಿಯ ನಿವಾಸಿಯಾಗಿದ್ದ ಹೆಡ್ ಕಾನ್ಸಟೇಬಲ್ ವೋರ್ವರು ಆಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ಇದೀಗ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ರಾತ್ರಿ ಎಂಟು ಗಂಟೆಗೆ ಧಾರವಾಡದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಬಕಾರಿ ಇಲಾಖೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿದ್ದ ಹುಸೇನಸಾಬ ಚೌಧರಿ ಎಂಬುವವರೇ ಸಾವಿಗೀಡಾದ್ದಾರೆ. ಇಂದು ಬೆಳಿಗ್ಗೆಯಿಂದ ಕೆಲಕಾಲ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ದೇಸಾಯಿ ವೃತ್ತದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕೆಲವೇ ಸಮಯದ ಹಿಂದೆ ಚಿಕಿತ್ಸೆ ಫಲಿಸದೇ ಹೆಡ್ ಕಾನ್ಸ್ ಟೇಬಲ್ ಸಾವಿಗೀಡಾಗಿದ್ದು, ಮೃತದೇಹವನ್ನ ನಗರಕ್ಕೆ ತರಲಾಗುತ್ತಿದೆ. ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಹೆಸರು ಮಾಡಿದ್ದ, ಹುಸೇನಸಾಬ ಇನ್ನಿಲ್ಲವಾಗಿರುವುದು ತೀವ್ರ ದುಃಖದ ಸಂಗತಿಯಾಗಿದೆ.