ಹುಬ್ಬಳ್ಳಿ ಹೆಸ್ಕಾಂ “ಹೆಡ್ ಕಾನ್ಸಟೇಬಲ್” ಕೊರೋನಾದಿಂದ ಸಾವು…!

ಹುಬ್ಬಳ್ಳಿ: ಈ ಹಿಂದೆ ಕಮೀಷನರೇಟಿನ ಹುಬ್ಬಳ್ಳಿ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ರೈಟರ್ ಆಗಿದ್ದ ಹೆಡ್ ಕಾನ್ಸಟೇಬಲ್ ರೋರ್ವರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಹೆಡ್ ಕಾನ್ಸಟೇಬಲ್ ರಮೇಶ ಅಡರಕಟ್ಟಿ ಎಂಬುವವರೇ ಸಾವಿಗೀಡಾಗಿದ್ದಾರೆ. ಕಳೆದ ನಾಲ್ಕೈದು ದಿನದಲ್ಲಿ ಆರೋಗ್ಯದಲ್ಲಿಏರುಪೇರಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿಯಾಗಿದ್ದ ರಮೇಶ ಅಡರಕಟ್ಟಿ, ಕರ್ತವ್ಯನಿಷ್ಠೆಯನ್ನ ಹೊಂದಿದ್ದರು. ಇವರ ಸಾವಿನಿಂದ ಅವಳಿನಗರ ಪೊಲೀಸರಲ್ಲಿ ತೀವ್ರ ಬೇಸರಗೊಂಡಿದ್ದಾರೆ.
ಎರಡು ಮಕ್ಕಳನ್ನ ಹೊಂದಿರುವ ರಮೇಶ, ಈ ಮೊದಲು ಎಸಿಪಿ ರೈಟರ್ ಆಗಿ ಕಾರ್ಯನಿರ್ವಹಿಸಿದ್ದರು. 1998ರ ಬ್ಯಾಚಿನ ರಮೇಶ, ಎಲ್ಲರೊಂದಿಗೆ ಚೆನ್ನಾಗಿರುತ್ತಿದ್ದರು.