ರಸ್ತೆ ಅಪಘಾತ ಹೆಡ್ ಕಾನ್ಸಟೇಬಲ್ “ಬಾಬು ಕಟಗಿಗೆ” ತೀವ್ರ ಗಾಯ…!

ಧಾರವಾಡ: ನಗರದಿಂದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಗುಡ್ ಮಾರ್ನಿಂಗ್ ಡ್ಯೂಟಿಗೆ ಹಾಜರಾಗಲು ಹೊರಟ ಸಮಯದಲ್ಲಿ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟಿಯಲ್ಲಿದ್ದ ಹೆಡ್ ಕಾನ್ಸಟೇಬಲ್ ರ ಕಾಲಿಗೆ ತೀವ್ರ ಥರದ ಗಾಯಗಳಾದ ಘಟನೆ ಲಕಮನಹಳ್ಳಿ ಬಳಿಯಲ್ಲಿ ಸಂಭವಿಸಿದೆ.

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಓಓಡಿಯಲ್ಲಿರುವ ಹೆಡ್ ಕಾನ್ಸಟೇಬಲ್ ಬಾಬು ಕಟಗಿಯವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಳಗಿನ ಜಾವ ಆರಂಭವಾಗುವ ಗುಡ್ ಮಾರ್ನಿಂಗ್ ಸೇವೆಗೆ ಹೋಗುವ ಸಮಯದಲ್ಲಿ ಮೂರು ಜನರಿದ್ದ ಬೈಕೊಂದು ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ ಸ್ಕೂಟಿಯಲ್ಲಿದ್ದ ಬಾಬು ಕಟಗಿ ಅವರ ಕಾಲಿನ ಮೇಲೆ ಬೈಕ್ ಬಿದ್ದು, ತೀವ್ರ ಥರದ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡದ ಸಂಚಾರಿ ಠಾಣೆಯ ಪೊಲೀಸರು, ಪರಿಶೀಲನೆಯನ್ನ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.