ಧಾರವಾಡ ಶವದ ಕಥೆಯೂ… ರಾತ್ರಿಯಿಂದ ಬೆಳಗಿನವರೆಗೂ ನಡೆದ ವ್ಯಥೆಯೂ..!
1 min readರಾತ್ರಿಯಲ್ಲಿ ಶವವನ್ನ ಸಾಗಿಸಲು ಪೊಲೀಸರೇ ಅಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಹೋಗಿ, ಮರಳಿ ಬರುವ ಸ್ಥಿತಿ ನಿರ್ಮಾಣವಾಗಿತ್ತು..
ಧಾರವಾಡ: ನಗರದ ಲಕ್ಷ್ಮಿಸಿಂಗನಕೇರಿ ಪ್ರದೇಶದ ವ್ಯಕ್ತಿಯೋರ್ವನ ಅನಾರೋಗ್ಯ ಮತ್ತೂ ಸಾವಿನ ಪ್ರಕರಣವೊಂದು ಸಾಕಷ್ಟು ಗೊಂದಲ ಮೂಡಿಸಿ, ಬೆಳಿಗ್ಗೆ ನಾಲ್ಕು ಗಂಟೆಯವರೆಗೂ ಪೊಲೀಸರು ಹರಸಾಹಸ ಪಡಬೇಕಾದ ಘಟನೆಯೊಂದು ಸದ್ದಿಲ್ಲದೇ ಮುಗಿದು ಹೋಗಿದೆ.
ಲಕ್ಷ್ಮೀಸಿಂಗನಕೇರಿ ಪ್ರದೇಶದ ನಿವಾಸಿಯಾಗಿದ್ದ ಸುಭಾಸ ಎನ್ನುವ ವ್ಯಕ್ತಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದ. ತಕ್ಷಣವೇ ಆತನನ್ನ ಸತ್ತೂರು ಗ್ರಾಮದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು. ಆದರೆ, ಹೋಗುವುದರೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.
ವ್ಯಕ್ತಿಯ ಸಾವಿನ ಸುದ್ಧಿಯನ್ನ ಅರಗಿಸಿಕೊಳ್ಳದ ಮೃತನ ಸಂಬಂಧಿಕರು ಖಾಸಗಿ ಆಸ್ಪತ್ರೆಯ ವೈದ್ಯನಿಗೆ ಧಮಕಿ ಹಾಕಿ, ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ ಖಾಸಗಿ ಆಸ್ಪತ್ರೆಯ ವೈಧ್ಯ ಪೊಲೀಸ್ ಠಾಣೆಗೆ ಮಾಹಿತಿಯನ್ನ ನೀಡಿ, ‘ಈ ವ್ಯಕ್ತಿಯ ಸಾವಿನ ಬಗ್ಗೆ ಸಂಶಯವಿದೆ’ ಎಂದು ಹೇಳಿದ್ದರು.
ಆತ ತಕ್ಷಣವೇ ಡೈರಿಯಲ್ಲಿ “ಎಂಎಲ್ಸಿ” ಎಂಟ್ರಿ ಮಾಡಲಾಗಿತ್ತು. ಆದರೆ, ಸಿಟ್ಟಿಗೆದ್ದಿದ್ದ ಸಂಬಂಧಿಕರು ಮೃತ ದೇಹವನ್ನ ತೆಗೆದುಕೊಂಡು ಧಾರವಾಡಕ್ಕೆ ಬಂದು ಬಿಟ್ಟಿದ್ದರು. ಕಾನೂನಿನ ಪ್ರಕಾರ ಎಂಎಲ್ಸಿ ನಮೂದು ಆಗಿದ್ದರೇ, ಮರಣೋತ್ತರ ಪರೀಕ್ಷೆ ಮಾಡಿಸಲೇಬೇಕು.
ಇದೇಲ್ಲ ಕಾರಣದಿಂದ ಡಿಸಿಪಿ ಸೇರಿದಂತೆ ಎಲ್ಲರೂ ಧಾರವಾಡದ ಲಕ್ಷ್ಮೀಸಿಂಗನಕೇರಿ ಪ್ರದೇಶಕ್ಕೆ ಬಂದು ಶವವನ್ನಕೊಡುವಂತೆ ಬೇಡಿಕೊಂಡರೂ, ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ಸುಮಾರು ಮೂರು ಗಂಟೆಯ ಪ್ರಯತ್ನದ ನಂತರ ಪೊಲೀಸರಿಗೆ ಶವವನ್ನ ಕೊಡಲಾಯಿತಾದರೂ, ಖಾಸಗಿ ಆಸ್ಪತ್ರೆಗೆ ಮತ್ತೆ ತೆಗೆದುಕೊಂಡು ಹೋದಾಗ, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲ್ಲವೆಂದ ಮೇಲೆ, ಮತ್ತೆ ಶವವನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದೇಲ್ಲಾ ಮುಗಿದಾಗ ಬರೋಬ್ಬರಿ ಬೆಳಗಿನ ನಾಲ್ಕು ಗಂಟೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಸದಾಕಾಲ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಇಂತಹ ದುಃಸ್ಥಿತಿಯನ್ನ ಅನುಭವಿಸಬೇಕಾಗತ್ತೆ.