ಕ್ವಾಟರ್ ಬಾಟ್ಲೂ-ಟೆಟ್ರಾ ಪ್ಯಾಕು ಕಾರ್ಪೋರೇಷನ್ನೇ ಬಾರ್: ಹುಬ್ಬಳ್ಳಿ ಸ್ಥಿತಿ ನೋಡಿ ಸ್ವಾಮಿ
ಹುಬ್ಬಳ್ಳಿ: ಖಾಲಿ ಕ್ವಾಟರ್ ಬಾಟ್ಲೂ.. ಎನ್ನುವ ಸ್ಥಿತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯದ್ದಾಗಿದೆ. ಅದರ ಆವರಣವೇ ಕುಡುಕರ ಬೀಡಾಗಿದ್ದು, ಎಲ್ಲವೂ ಖುಲ್ಲಂಖುಲ್ಲಾ ನಡೆಯುತ್ತಿದ್ದರೂ ಹೇಳೋರು ಇಲ್ಲಾ.. ಕೇಳೋರು ಇಲ್ಲಾ ಎನ್ನುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣ ಕುಡುಕರ ಎಂಜಾಯ್ ಮಾಡುವ ಸ್ಥಳವಾಗಿದೆ. ಸರಕಾರ ಇನ್ನೂ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನ ತೆಗೆಯುವುದಕ್ಕೆ ಅವಕಾಶ ಕೊಡದೇ ಇರುವುದರಿಂದ ಪಾರ್ಸಲ್ ದಾರೂ ತಂದು ಇಲ್ಲಿಯೇ ಕುಡಿಯತೊಡಗಿದ್ದಾರೆ.
ಯಾವುದೇ ರೀತಿಯ ಅಂಜಿಕೆ-ಅಳುಕಿಲ್ಲದೆ ಮದ್ಯ ಸೇವನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಜೂರು ಹೆಚ್ಚಾದರೇ ಅಲ್ಲೇ ಬಸ್ ನಿಲ್ದಾಣದಲ್ಲಿ ಮಲಗಿಯೂ ಬಿಡುತ್ತಾರೆ. ಹೀಗಾಗಿ ಕುಡುಕರ ಆರಾಮ ತಾಣವಾಗಿ ಮಾರ್ಪಟ್ಟಿದೆ. ಮಹಿಳೆಯರು- ಮಕ್ಕಳು ಇದೇ ಪ್ರದೇಶದಲ್ಲಿ ತಿರುಗುವುದು ಹೆಚ್ಚುಯಿರುವುದರಿಂದ ಕೆಲವರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಇಂತಹ ವ್ಯವಸ್ಥೆಯನ್ನ ಕಡಿಮೆ ಮಾಡುವ ಗೋಜಿಗೆ ಪಾಲಿಕೆ ಆಯುಕ್ತರು ಹೋಗಬೇಕಿದೆ. ರಸ್ತೆ ಕುಡುಕರಿಗೆ ತಕ್ಕ ಪಾಠ ಕಲಿಸಬೇಕಿದೆ.