ಬಿಜೆಪಿ ಸರಕಾರ ಬರೀ ಮಾತಾಡುತ್ತಿದೆ-ಕೆಲಸ ಮಾಡುತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಸರ್ಕಾರದ ಕೆಲಸ ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ. ಕೋವಿಡ್ ವಿಚಾರದಲ್ಲಿ ಸರ್ಕಾರ ಹಣ ಲೂಟಿ ಮಾಡಿದೆ ಅಂತ ಆರೋಪ ಕೇಳಿ ಬರ್ತಿದೆ. ವಿಪಕ್ಷ ನಾಯಕರು, ಸಿಎಂಗೆ ನನ್ನ ಮನವಿ. ಇಬ್ಬರು ಆರೋಪ ಪ್ರತ್ಯಾರೋಪ ಮಾಡೋದು ಬಿಟ್ಟು ಜನ ಪರ ಕೆಲಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಸಿಎಂ ಕೂಡಾ ಕೆಲ ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರಿದೆ ಅಂತ ಹೇಳಿದ್ದಾರೆ. ಜನ ಇದನ್ನ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಕಳೆದ 3 ತಿಂಗಳಿಂದ ಕೇವಲ ಸಭೆ ಮತ್ತು ಮಾತಿಗೆ ಮಾತ್ರ ನಿಮ್ಮ ಆಡಳಿತ ಸೀಮಿತವಾಗಿದೆ. ಈಗಲಾದ್ರೂ ಎಲ್ಲಿ ಲೋಪ ಆಗಿದೆ ಅಂತ ತಿಳಿದುಕೊಂಡು ಅದನ್ನ ಸರಿಪಡಿಸಿ. ಸಾಮಗ್ರಿ ಖರೀದಿಯಲ್ಲಿ ಅಕ್ರಮ ಅಂತ ವಿಪಕ್ಷ ನಾಯಕರು ಆರೋಪ ಮಾಡಿದ್ದಾರೆ. ಮತ್ತೆ ಇಂತಹ ಆರೋಪ ಕೇಳಿ ಬರಬಾರದು. ಇದಕ್ಕಾಗಿ ವಿಪಕ್ಷ ನಾಯಕರನ್ನ ಕೋವಿಡ್ ಸಭೆ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಸೇರಿಸಿಕೊಳ್ಳಿ ಎಂದು ಸಿಎಂಗೆ ಸಲಹೆ ನೀಡಿದ್ದಾರೆ.
ನಮ್ಮ ಪಕ್ಷದಿಂದ ನಾವು ಯಾವುದೇ ಆರೋಪ ಮಾಡೊಲ್ಲ. ನಮಗೆ ನಂಬಿಕೆ ಇದೆ ಜನರ ಹಣ ದುರುಪಯೋಗ ಆಗೊಲ್ಲ ಅಂತಾ. ಹೀಗಾಗಿ ನಮ್ಮ ಪಕ್ಷದಿಂದ ಆರೋಪ ಮಾಡೊಲ್ಲ. 8 ವಲಯಗಳ ಉಸ್ತುವಾರಿ ಸಚಿವರಿಗೆ ನೀಡೋ ವಿಚಾರ. ಇದನ್ನ ಹೇಗೆ ಮಾಡ್ತೀರಾ. ಈ ಸಮಿತಿ ಕೇವಲ ಕಾಟಾಚಾರಕ್ಕೆ ಆಗಬಾರದು. ಖಾಸಗಿ ಆಸ್ಪತ್ರೆ ವೈದ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಅದು ಬಿಟ್ಟು ನೀರು, ಕರೆಂಟ್ ಕಟ್ ಮಾಡ್ತೀವಿ ಅಂತ ಬೆದರಿಕೆ ಹಾಕಬೇಡಿ. ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಗಳಿಗೆ ಸರ್ಕಾರದ ಸವಲತ್ತು ಮತ್ತು ವಿಮೆ ಮಾಡಿಸಿ. ಎಕ್ಸಿಬಿಷನ್ ಸೆಂಟರ್ ನಲ್ಲಿ 10 ಸಾವಿರ ಬೆಡ್ ಅಂತ ಹೇಳ್ತಿದ್ದೀರಾ. ಇದರ ನಿರ್ವಹಣೆಗೆ ಎಷ್ಟು ವೈದ್ಯರು, ಸಹಾಯಕರು ಬೇಕಾಗುತ್ತೆ. ಈ ವಿಚಾರದಲ್ಲಿ ಹುಡುಗಾಟಿಕೆ ಮಾಡಬೇಡಿ. ಪಿಜಿ ಸ್ಟೂಡೆಂಟ್, ಮೆಡಿಕಲ್ ಸ್ಟೂಡೆಂಟ್ ತಂದೆ ತಾಯಿಗಳಿಗೂ ಆತಂಕ ಇರುತ್ತೆ. ಅವ್ರಿಗೂ ಸರ್ಕಾರದ ಸವಲತ್ತು ಒದಗಿಸಿ ಎಂದು ಹೇಳಿದ್ದಾರೆ.
ಸಣ್ಣ ಪುಟ್ಟ ಆಸ್ಪತ್ರೆ ಗಳು ಸಾಲ ಮಾಡಿ ಆಸ್ಪತ್ರೆ ಮಾಡಿರುತ್ತಾರೆ. ಅವ್ರಿಗೂ ಸರ್ಕಾರ ಸವಲತ್ತು ಕೊಡಬೇಕು. ತಜ್ಞರು ಕೊಟ್ಟ ವರದಿ ಪ್ರಕಾರ ಅಂತರ್ ಜಿಲ್ಲಾ ವಾಹನಗಳ ಓಡಾಟ ನಿಷೇಧ ಮಾಡಿ. ಮಂತ್ರಿಗಳಲ್ಲಿ ಸಮನ್ವಯ ಕೊರತೆ ಇದೆ. ಅದನ್ನ ಸರಿಪಡಿಸಿ. ಟೆಸ್ಟ್ ರಿಪೋರ್ಟ್ ತಡ ಆಗ್ತಿರೋದು ಕೊರೋನಾ ಹರಡೋಕೆ ಕಾರಣ ಆಗ್ತಿದೆ. ಶೀಘ್ರವೇ ಟೆಸ್ಟ್ ರಿಪೋರ್ಟ್ ಬರೋ ಹಾಗೆ ಮಾಡಿ. ಕೊರೋನಾ ಟೆಸ್ಟ್ ಗೆ ಯಾವುದೇ ಹಣ ಪಡೆಯದೇ ಫ್ರೀ ಮಾಡಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಎಚ್ಡಿಕೆ ಸಲಹೆ ನೀಡಿದ್ದಾರೆ.