ಹುಬ್ಬಳ್ಳಿಯ ಮಹಿಳಾ ಮುಖ್ಯಪೇದೆ ಕೊರೋನಾಗೆ ಬಲಿ: ತಬ್ಬಲಿಯಾದ ಮಗ
ಹುಬ್ಬಳ್ಳಿ: ಕಳೆದ ಹತ್ತು ದಿನಗಳಿಂದ ಕೊರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಠಾಣೆಯ ಮುಖ್ಯಪೇದೆ ಕೊರೋನಾ ಪಾಸಿಟಿವ್ ನಿಂದ ಬಳಲಿ, ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.
ಮಹಿಳಾ ಠಾಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಹವಾಲ್ದಾರ್ ‘ಬಾಯಿ’ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಕೆಲವು ದಿನಗಳ ಹಿಂದೆ ನಿರಂತರವಾಗಿ ಜ್ವರ ಬರಲಾರಂಭಿಸಿದ್ದರಿಂದ ಕೋವಿಡ್-19 ಟೆಸ್ಟ್ ಮಾಡಿಸಿಕೊಂಡಿದ್ದರು. ಆಗ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಹತ್ತು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಅವಳಿನಗರದಲ್ಲೂ ಕೊರೋನಾಗೆ ಬಲಿಯಾಗುವ ಪೊಲೀಸರ ಸಂಖ್ಯೆ ಹೆಚ್ಚಾಗುತ್ತಿದೆ.
ಹುಬ್ಬಳ್ಳಿ ಮಹಿಳಾ ಠಾಣೆಯ ಮುಖ್ಯಪೇದೆಗೆ ಓರ್ವ ಮಗನಿದ್ದು, ಕುಟುಂಬಕ್ಕೆ ತುಂಬಲಾರದ ನಷ್ಟವನ್ನ ಈ ಸಾವು ನೀಡಿದಂತಾಗಿದೆ. ಇವರ ಸಾವಿನ ಸುದ್ದಿ ಠಾಣೆಯಲ್ಲೂ ನೀರವಮೌನವನ್ನ ತಂದೊಡ್ಡಿದೆ.