ಕೊರೋನಾಗೆ ಮುಖ್ಯ ಪೇದೆ ಸಾವು: ದಯವಿಟ್ಟು ಹುಷಾರಾಗಿ ಕರ್ತವ್ಯ ನಿರ್ವಹಿಸಿ ಪೊಲೀಸರೇ..

ಬಳ್ಳಾರಿ: ಕೊರೋನಾ ವಾರಿಯರ್ ಗಳು ಇದೇ ವೈರಸ್ ಗೆ ಬಲಿಯಾಗುತ್ತಿರುವುದು ನಿಲ್ಲುತ್ತಿಲ್ಲ. ಕಳೆದ ಆಗಷ್ಟ 15ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ, ಹೆಡ್ ಕಾನ್ಸಟೇಬಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿ ನಡೆದಿದೆ.
ಮೂಲತಃ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಮೂಲದ ಮುಖ್ಯ ಪೇದೆ ಎಚ್.ಎಂ.ವೀರಭದ್ರಯ್ಯ ಕೊರೋನಾದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಗಸ್ಟ್ 15ರಂದು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2-3 ದಿನಗಳ ಹಿಂದೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು.
ಅತ್ಯುತ್ತಮ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆ ವೀರಭದ್ರಯ್ಯ ಅಗಲಿಕೆಯಿಂದ ಪೊಲೀಸ್ ಠಾಣೆಯಲ್ಲಿ ನೀರವ ಮೌನ ಆವರಿಸಿದೆ. ಇಲಾಖೆಯಲ್ಲಿ ಕೊರೋನಾದಿಂದ ಮರಣವಾಗುತ್ತಿರುವುದು ಕುಟುಂಬಸ್ಥರಲ್ಲಿ ಮಾನಸಿಕ ನೆಮ್ಮದಿಯನ್ನ ಹಾಳು ಮಾಡುತ್ತಿದೆ.