ಮರಳಿ ಬಾರದೂರಿಗೆ ಪಯಣ ಬೆಳೆಸಿದ ಮಹಿಳಾ ಪಿಎಸೈ ಪತಿ: ಪಿಎಸೈ ಧಾರವಾಡ ಸಂಚಾರಿ ಠಾಣೆಯಲ್ಲೂ ಇದ್ರೂ…!
ಬೆಳಗಾವಿ: ತನ್ನವರೊಂದಿಗೆ ಕ್ಷೇಮವಾಗಿ ಇರಬೇಕೆಂದು ಹುಟ್ಟಿದೂರಿಗೆ ಹೋಗಿದ್ದ ಬೆಳಗಾವಿ ಉತ್ತರ ಸಂಚಾರಿ ಠಾಣೆಯ ಹವಾಲ್ದಾರ್ ಹೃದಯಾಘಾತದಿಂದ ತೀರಿಕೊಂಡ ಘಟನೆ ಖಾನಾಪುರದಲ್ಲಿ ಸಂಭವಿಸಿದೆ.
ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲೂ ಇತ್ತೀಚೆಗೆ ಕಾರ್ಯನಿರ್ವಹಿಸಿದ್ದ ಕೃಷ್ಣವೇಣಿ ಪತ್ತಿಯಾಗಿರುವ ಸಂಜು ಬಂಡಾರಿ ಮೃತ ಹವಾಲ್ದಾರ್.
ಸಂಜು ಅವರ ಹುಟ್ಟೂರಾದ ಹಟ್ಟಿಹೊಳಿ ಗ್ರಾಮಕ್ಕೆ ಹೋದ ಸಮಯದಲ್ಲಿ ಹೃದಯಾಘಾತವಾಗಿದೆ. ತಕ್ಷಣವೇ ಖಾನಾಪುರಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಸಂಜು ಬಂಡಾರಿ ಸಂಚಾರಿ ಠಾಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಅವರ ಧರ್ಮಪತ್ನಿ ಕೂಡಾ ಸಧ್ಯ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪಿಎಸೈ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸಂಜು ಅವರ ನಿಧನ ಅವರ ಮನೆತನಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.