Posts Slider

Karnataka Voice

Latest Kannada News

ಧಾರವಾಡ ಪೊಲೀಸ್ ಮೇಲೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು: ವೃದ್ಧನಿಗೆ ಲಾಟಿಯೇಟು ಕೊಟ್ಟಿದ್ಯಾರು..?

1 min read
Spread the love

ಹುಬ್ಬಳ್ಳಿ: ವೃದ್ಧರೋರ್ವರಿಗೆ ತಮ್ಮದಲ್ಲದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಠಿಯಿಂದ ಹೊಡೆದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಪೊಲೀಸ್ ವಿರುದ್ಧವೇ ಎಫ್ ಐಆರ್ ದಾಖಲಾಗಿದೆ. ಅವಳಿನಗರದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಪೇದೆಯ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಧಾರವಾಡ ಉಪನಗರ ಠಾಣೆಯ ಪೊಲೀಸ್ ಪೇದೆಯ ವಿರುದ್ಧವೇ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆ ಬೈಕಿನಲ್ಲಿ ಹೊರಟಾಗ ಕರುಣಾಕರ ಶೆಟ್ಟಿ ಎಂಬುವವರ ತಂದೆಯನ್ನ ಧಾರವಾಡದ ಪೊಲೀಸ್ ಪೇದೆ ಲಾಠಿಯಿಂದ ಹೊಡೆದಿದ್ದ.

ಈ ಪ್ರಕರಣವನ್ನ ಮಾತುಕತೆಯ ಮೂಲಕ ಬಗೆಹರಿಸುವ ಯತ್ನ ನಡೆಯಿತಾದರೂ, ಇವತ್ತು ಅನಿವಾರ್ಯವಾಗಿ ಎಫ್ ಐಆರ್ ದಾಖಲಾಗಿದ್ದು, ಹೊಸ ಪ್ರಕರಣವಾಗಿದೆ. ಬೈಕ್ ಅಪಘಾತವಾದಾಗ ವೃದ್ಧರಿಗೆ ಲಾಠಿಯಿಂದ ಹೊಡೆದಿದ್ದು ಶೆಟ್ಟಿಯವರ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿತ್ತು. ಇದೇ ಕಾರಣದಿಂದ ಪ್ರಕರಣವನ್ನೇ ದಾಖಲು ಮಾಡಬೇಕೆಂದು ಒತ್ತಾಯ ಮಾಡಿದ್ದರು. ಹೀಗಾಗಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ತನಿಖೆ ನಡೆದಿದೆ.


Spread the love

Leave a Reply

Your email address will not be published. Required fields are marked *

You may have missed