ಡ್ರಗ್ಸ್ ತುಗೊಂಡು ಕೊಲೆ: ಆರೋಪಿಗಳನ್ನ ಸುಮ್ಮನೆ ಬಿಡಲ್ಲವೆಂದ ನತದೃಷ್ಟ ತಂದೆ
ಹುಬ್ಬಳ್ಳಿ: ಮನೆಯ ಮುಂದಿನ ಯಜಮಾನನಾಗಬೇಕಿದ್ದ ಯುವಕ ಗೆಳೆಯರಿಂದಲೇ ಕೊಲೆಯಾಗಿದ್ದು, ಆರೋಪಿಗಳು ಡ್ರಗ್ಸ್ ತುಗೊಂಡು ಇದನ್ನ ಮಾಡಿದ್ದಾರೆಂದು ಯುವಕನ ಮನೆಯವರು ದೂರಿದ್ದು, ಚೋಟಾ ಮುಂಬೈನಲ್ಲಿ ಡ್ರಗ್ಸ್ ಸಿಗ್ತಾಯಿದೇಯಾ ಎಂಬ ಪ್ರಶ್ನೆಯನ್ನ ಹುಟ್ಟಿ ಹಾಕಿದೆ.
ಗುತ್ತಿಗೆದಾರ ಕೃಷ್ಷಾ ಕಡೆಮನಿಯವರ ಪುತ್ರ ಲೋಕೇಶನ ಕೊಲೆ ನಿನ್ನೆ ರಾತ್ರಿ ಶ್ರೀಕೃಷ್ಣ ಕಲ್ಯಾಣ ಮಂಟಪದ ಬಳಿ ಮಾಡಿ ಪರಾರಿಯಾಗಿದ್ದರು. ಕೊಲೆ ಮಾಡಿದ ಏಳು ಜನರನ್ನ ಉಪನಗರ ಠಾಣೆ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆ.
ಈ ಕೊಲೆಯಲ್ಲಿ ಡ್ರಗ್ಸ್ ಮಾತು ಕೇಳಿ ಬಂದಿರುವುದರಿಂದ ಪೊಲೀಸರು ಈ ಬಗ್ಗೆಯೂ ತನಿಖೆ ಮಾಡಬೇಕಿದೆ.
ಈಗಾಗಲೇ ನತದೃಷ್ಟ ತಂದೆ ಕೃಷ್ಣಾ, ಮಗನ ಸಾವಿನಿಂದ ಬಳಲಿ ಹೋಗಿದ್ದು, ಕೊಲೆಗೆಡುಕರನ್ನ ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ ಎಂದಿದ್ದಾರೆ.