ಹುಬ್ಬಳ್ಳಿಯಲ್ಲಿ ಗೂಂಡಾ ರಾಜ್: ಹಾಡುಹಗಲೇ ವ್ಯಕ್ತಿಗೆ ಗೂಸಾ- Exclusive Video
ಹುಬ್ಬಳ್ಳಿ: ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನಗರದಲ್ಲಿ ಹಾಡುಹಗಲೇ ಗುಂಡು ಹೊಡೆದು ಹತ್ಯೆ ಮಾಡಿ ಪರಾರಿಯಾಗ್ತಾರೆ. ನಡು ಮಧ್ಯಾಹ್ನವೇ ಕಳ್ಳತನ ಮಾಡ್ತಾರೆ. ಅದನ್ನ ಮೀರಿ ಈಗ ಕಂಡ ಕಂಡವರನ್ನ ಮನಬಂದಂತೆ ಹೊಡೆಯೋಕೆ ಶುರು ಮಾಡಿದ್ದಾರೆ, ರೌಡಿಯಂತ ಕೀಚಕರು.. ಈ ಬಗ್ಗೆ ಮಾಹಿತಿಯಿದೆ ನೋಡಿ..
ಹುಬ್ಬಳ್ಳಿಯ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ನಿಂತಿದ್ದ ವ್ಯಕ್ತಿಯ ಜೇಬಿಗೆ ಯುವಕನೊಬ್ಬ ಕೈ ಹಾಕಿದಾ. ಇದನ್ನ ಪ್ರಶ್ನಿಸಲು ಹೋದ ವೃದ್ಧನಿಗೆ ಮನಬಂದಂತೆ ಯುವಕ ಹೊಡೆದಿದ್ದಾನೆ. ಹೊಡೆತ ತಾಳಲಾರದೆ ವ್ಯಕ್ತಿ ಕೆಳಗಡೆ ಬಿದ್ದಾಗ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ವ್ಯಕ್ತಿಯ ಮುಖವೆಲ್ಲ ರಕ್ತಮಯವಾಗಿದ್ದು, ಅಲ್ಲೇ ಇದ್ದವರು ಚಿಟಗುಬ್ಬಿ ಆಸ್ಪತ್ರೆಗೆ ಕಳಿಸಿದ್ದಾರೆ.
ಹುಬ್ಬಳ್ಳಿ ಪೊಲೀಸರೇ ಇಂತಹವರ ಬಗ್ಗೆ ಜಾಗೃತೆ ವಹಿಸಿ, ಇಲ್ಲದಿದ್ದರೇ ಇನ್ನಷ್ಟು ನಗರದ ವಾತಾವರಣವನ್ನ ಈ ಥರದ ದುಷ್ಟರು ಹಾಳು ಮಾಡುತ್ತಾರೆ.