ಭಾರತ ಕೆಂಡವಿದಂತೆ: ಮುಟ್ಟಿದ್ರೇ ತೊಂದ್ರೆಯಾಗೋದು ಚೀನಾಗೆ: ಚಕ್ರವರ್ತಿ ಸೂಲಿಬೆಲೆ
1 min readಹಾವೇರಿ: ರಾಹುಲಗಾಂಧಿಯವರಿಗೆ ಇತಿಹಾಸ ಮರೆತು ಹೋಗಿದೆ ಅನಿಸುತ್ತೆ. ಸೈನಿಕರು ಯಾಕೆ ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಿರಲಿಲ್ಲಾ ಎಂಬ ಅನೇಕ ಪ್ರಶ್ನೆ ರಾಹುಲ್ ಮಾಡಿದ್ದಾರೆ. ಗುಂಡು ಹಾರಿಸಬಾರದು ಎಂದು ಎರಡು ರಾಷ್ಟದ ನಡುವೆ ಒಪ್ಪಂದವಿದೆ. ಅದು ಅವರುಗಳ ಕಾಲದಲ್ಲೇ ಮಾಡಿರೋದನ್ನು, ಅವರು ಮರೆತು ಹೋಗಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಬಹಳ ಕೆಟ್ಟದಾಗಿ ಚೀನಿ ಸೈನಿಕರು ವರ್ತಿಸಿದ್ದಾರೆ. ಚೀನಿ ಸೈನಿಕರು, ನಮ್ಮ ಸೈನಿಕರನ್ನು ಸೆರೆ ಹಿಡಿದುಕೊಂಡು ಓಡಿ ಹೋದ್ರೂ ಎನ್ನುವುದಿದೆ. ಕೆಟ್ಟದಾದ ಈ ಪರಿಸ್ಥಿತಿಯಲ್ಲಿ ದೇಶದ ಪರವಾಗಿ ನಿಲ್ಲಬೇಕಿತ್ತು. ಈ ದೇಶದ ಸ್ವಾಭಿಮಾನ, ಗೌರವ ಕಾಪಾಡುವುದಕ್ಕೆ ಹೆಣಗಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ದುರಂತದ ಸಂಗತಿ ರಾಹುಲ್ ಭವಿಷ್ಯದ ಪ್ರಧಾನ ಮಂತ್ರಿ ಅಭ್ಯರ್ಥಿ ಎನ್ನುತ್ತಾರೆ. ಅವರು ಈ ರೀತಿ ಮಾತನಾಡುತ್ತಿರೋದು. ಖಂಡಿತವಾಗಿ ಇದು ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳೊಕೆ ಶೋಭೆಯಲ್ಲಾ ಎಂದು ವ್ಯಂಗ್ಯವಾಡಿದರು. ಸ್ವದೇಶಿ ಅಭಿಯಾನದಿಂದಾಗಿ ಯುದ್ಧಕ್ಕೆ ಚೈನಾ ಮುಂದಾಗೋದಿಲ್ಲಾ. ಪ್ರಧಾನಿ ಮೋದಿ ಕೊಟ್ಟಿರೋ ಎಚ್ಚರಿಕೆಗೆ ಚೀನಾ ಬೆದರಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಡೀ ಜಗತ್ತು ಚೀನಾ ವಿರುದ್ಧ ನಿಂತಿದೆ. ಇಸ್ರೇಲ್, ಅಮೇರಿಕಾ, ಆಸ್ಟ್ರೇಲಿಯಾ ಭಾರತದ ಪರ ನಿಂತಿವೆ. ಇಡೀ ಜಗತ್ತು ಭಾರತದ ಪರ ನಿಂತಿದೆ. ಚೈನಾ ಕೆಂಡವನ್ನು ಮುಟ್ಟಿದೆ, ಅದಕ್ಕೆ ಚೈನಾ ಹೆದರಬೇಕು, ಭಾರತ ಅಲ್ಲಾ ಎಂದರು.