ಅನ್ನಭಾಗ್ಯದ ಅಕ್ಕಿ ತಿನ್ನುತ್ತಿದ್ದ ಸಿದ್ಧಲಿಂಗೇಶ್ವರ ಟ್ರೇಡರ್ಸ್ ರೇಡ್: ಲಕ್ಷಾಂತರ ಮೌಲ್ಯದ ಅಕ್ಕಿ ವಶ

ಹಾವೇರಿ: ಅನಧಿಕೃತವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ, 250ಕ್ಕೂ ಕ್ವಿಂಟಾಲ್ ಅಕ್ಕಿಯನ್ನ ಹಾವೇರಿಯ ಎಪಿಎಂಸಿಯಲ್ಲಿರೋ ಸಿದ್ದಲಿಂಗೇಶ್ವರ ಟ್ರೇಡರ್ಸ್ ಗೋಡೌನನಲ್ಲಿ ಜಪ್ತಿ ಮಾಡಿದ್ದಾರೆ.
ಮೂರು ಲಕ್ಷ ಎಂಬತ್ತು ಸಾವಿರ ರುಪಾಯಿ ಮೌಲ್ಯದ ಅಕ್ಕಿಯನ್ನ ವಶಪಡಿಸಿಕೊಳ್ಳಲಾಗಿದ್ದು, ಹಾವೇರಿ ಪೊಲೀಸರ ಕಣ್ಣು ತಪ್ಪಿಸಿ ದಾವಣಗೆರೆ ಪೂರ್ವ ವಲಯದ ಐಜಿ ಸ್ಕ್ವಾಡ್ ಪಿಎಸೈ ಸಿದ್ದಾರೂಢ ಬಡಿಗೇರ ಮತ್ತು ಆಹಾರ ಇಲಾಖೆ ಉಪನಿರ್ದೇಶಕ ವಿನೋದಕುಮಾರ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ.
ಗೋಡೌನ್ ಮಾಲೀಕ ಶಿವಯೋಗಿ ಪಟ್ಟಣಶೆಟ್ಟಿ, ಸಹಾಯಕ ರವಿ ನಾಗನೂರ ಹಾಗೂ ಲಾರಿ ಚಾಲಕ ಶಿವಾ ಕರುಗಲ್ ಅವರುಗಳನ್ನ ಪೊಲೀಸರು ವಶಕ್ಕೆ ಪಡೆದು, ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.