ಕೇಸು ಹಾಕಿಸಿಕೊಂಡರೂ ಸೋಲದ ಕಾಂಗ್ರೆಸ್- ಫಲಿಸದ ಬಿಜೆಪಿಯಾಟ..!
ಹಾವೇರಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಾವೇರಿ ನಗರಸಭೆ ಚುನಾವಣೆಯಲ್ಲಿ ಕೊನೆಗೂ ಕಾಂಗ್ರೆಸ್ ಪಟ್ಟವೇರುವ ಮೂಲಕ, ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸಿ, ಅಧಿಕಾರದ ಗದ್ದುಗೆಯನ್ನ ಹಿಡಿದಿದೆ.
ಕಾಂಗ್ರೆಸ್ ನ ಮೂವರು ಸದಸ್ಯರ ಮೇಲೆ ಹೊಡೆದಾಟ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಿಸಿ, ಅಧಿಕಾರವನ್ನ ಪಡೆಯಬಹುದೆಂಬ ಕಲ್ಪನೆ ಮಾಡಿಕೊಂಡ ವಿರೋಧ ಪಕ್ಷಕ್ಕೆ ಹಿನ್ನೆಡೆಯಾಗಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಸ್ತುವಾರಿ ಹೊಂದಿರುವ ಹಾವೇರಿ ಜಿಲ್ಲೆಯ ನಗರಸಭೆ ಅಧಿಕಾರ ಕಾಂಗ್ರೆಸ್ ಗೆ ಲಭಿಸಿದೆ. ಸಂಖ್ಯಾಬಲದ ಕೊರತೆ ಹಿನ್ನೆಲೆಯಲ್ಲಿ
ಚುನಾವಣಾ ಕಣದಿಂದ ಬಿಜೆಪಿ ಹಿಂದೆ ಸರಿದಿದೆ.
ಅವಿರೋಧವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಜೀವ ನೇರಲಿಗಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜಹೀದಾ ಜಮಾದಾರ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಬಾವುಟವನ್ನ ನಗರಸಭೆಯಲ್ಲಿ ಹಾರಿಸಿದ್ದಾರೆ.