Posts Slider

Karnataka Voice

Latest Kannada News

ಶಿಗ್ಗಾಂವಿಗೂ ಕಂಟಕವಾಗುತ್ತಿದೆ ಮುಂಬೈ ನಂಟು: ಜಿಲ್ಲಾಧಿಕಾರಿ ಮಾಹಿತಿ

1 min read
Spread the love

ಹಾವೇರಿ: ಮುಂಬೈನಿಂದ ಬಂದಿದ್ದ 57 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದ್ದು, ವ್ಯಕ್ತಿಯೂ ಶಿಗ್ಗಾಂವಿ ಪಟ್ಟಣದ ನಿವಾಸಿಯಾಗಿದ್ದಾನೆಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದ್ದಾರೆ.

ಮೇ 19,ರಂದು ಶಿಗ್ಗಾಂವಿಗೆ ಬಂದು ಕ್ವಾರಂಟೈನ್ ಆಗಿದ್ದ ಕಾರ್ಮಿಕರಲ್ಲಿ ಸೋಂಕು ದೃಢಪಟ್ಟಿದೆ. ಓಲಾ ಕಾರ್ ಬಾಡಿಗೆ ಮಾಡಿಕೊಂಡು ಪತ್ನಿ ಮತ್ತು ಮಗಳೊಂದಿಗೆ ಬಂದಿದ್ದ ಸೋಂಕಿತ. ಶಿಗ್ಗಾಂವಿ ತಾಲೂಕಿನ ಜಕ್ಕಿನಕಟ್ಟಿ ಸರಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಆಗಿದ್ದ ಸೋಂಕಿತ P3271. ಮೇ 24 ರಂದು ಸೋಂಕಿತನ ಗಂಟಲು ದ್ರವವನ್ನ ಲ್ಯಾಬ್ ಗೆ ಕಳಿಸಿದ್ದ ಆರೋಗ್ಯ ಇಲಾಖೆ. ಸೋಂಕು ದೃಢಪಡ್ತಿದ್ದಂತೆ ಸೋಂಕಿತನನ್ನ ಕೋವಿಡ್ 19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದರು.


Spread the love

Leave a Reply

Your email address will not be published. Required fields are marked *