ಪ್ಲೀಸ್, ನಂಗೆ ಹುಡುಗಿ ಹುಡುಕಿ: 63 ವರ್ಷದ ಚಿರಯುವಕನ ಮನವಿ

ಹಾವೇರಿ: ಇದು ಅಚ್ಚರಿಯಾದರೂ ನೀವು ನಂಬಲೇಬೇಕಾದ ಸುದ್ದಿ. ತಮ್ಮ ಜಾತಿಯ ಕನ್ಯಾ ಹುಡುಕಿ ಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು ಓರ್ವ ಅವಿವಾಹಿತ ವೃದ್ಧ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿರುವ ಘಟನೆಯಿದು.
ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಒಗೆ ಮನವಿ ಮಾಡಿದ 63 ವರ್ಷದ ವೃದ್ಧ ದ್ಯಾಮಣ್ಣ ಕಮ್ಮಾರ(63).
ನಾನು ದ್ಯಾಮವ್ವನ ಗುಡಿಯ ಪೂಜಾರಿಯಾಗಿದ್ದೇನೆ. ನನಗೆ ಮದುವೆಯಾಗಿಲ್ಲ,ಎಷ್ಟು ಹುಡುಕಿದರೂ ಕನ್ಯಾ ಸಿಗುತ್ತಿಲ್ಲ. ಕಾರಣ ನನಗೆ ಅಡುಗೆ ಮಾಡಲು ಯಾರು ಇಲ್ಲ. ಆದ್ದರಿಂದ, ನನಗೆ ಮದುವೆಯಾಗಲು ಆಸೆಯಾಗಿದೆ. ನೀವು ನನಗೆ ಕನ್ಯಾ ಹುಡುಕಿ ಮದುವೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ ವರ ಮಹಾಶಯ.
ಮನವಿ ಸ್ವೀಕರಿಸಿ ಗ್ರಾಪಂನ ಅಧಿಕೃತ ಸ್ವೀಕೃತ ಮುದ್ರೆ ಒತ್ತಿ ಸಹಿ ಮಾಡಿರುವ ಗ್ರಾಪಂ ಕಾರ್ಯದರ್ಶಿ, ಆದಷ್ಟು ಬೇಗನೇ ವಧು ಹುಡುಕುವ ಭರವಸೆ ನೀಡಿದ್ದಾರಂತೆ.