ಟಿವಿ ಒಲ್ಲೆ ಅಂದವನಿಗೆ ಟಿವಿ ಮುಂದೆ ನಿಲ್ಲಿಸಿದ್ದು ಮೋಹನ ಹೆಗಡೆ- ಪ್ರಶಸ್ತಿ ವಿಜೇತ ಹರ್ಷ ಕುಲಕರ್ಣಿ ಬಗ್ಗೆ ನಿಮಗೆಷ್ಟು ಗೊತ್ತು..!
1 min readಹುಬ್ಬಳ್ಳಿ: ಮನೆಯೇ ಮೊದಲ ಪಾಠ ಶಾಲೆಯಂಬಂತೆ ಮಾಧ್ಯಮಲೋಕಕ್ಕೆ ಬಂದ ಯುವಕ, ಟಿವಿಗಳ ಸಹವಾಸವೇ ಬೇಡವೆಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವನನ್ನ ಹಿರಿಯರೊಬ್ಬರು ತಂದು ಟಿವಿ ಮುಂದೆ ನಿಲ್ಲಿಸಿದ ಪರಿಣಾಮವೇ ಇಂದು ಜಿಲ್ಲಾ ಪ್ರಶಸ್ತಿಗೆ ಭಾಜನರಾಗುವಂತೆ ಮಾಡಿದೆ.
ಹುಬ್ಬಳ್ಳಿಯ ಹರ್ಷ ಕುಲಕರ್ಣಿ, ಜರ್ನಲಿಸಂ ಮಾಡುವಾಗಲೇ ದೂರದ ಬಳ್ಳಾರಿಗೆ ಪಬ್ಲಿಕ್ ಟಿವಿ ವರದಿಗಾರನಾಗಿ ಸೇರ್ಪಡೆಗೊಂಡರು. ಇದಕ್ಕೆ ಕಾರಣವಾಗಿದ್ದು, ಅವರ ತಾಯಿ ಸುನೀತಾ. ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಯಿಯ ಪ್ರೇರಣೆಯಿಂದಲೇ ಜರ್ನಲಿಸಂ ಕಲಿತದ್ದು ಕೂಡಾ.
ಬಿಸಿಲೂರು ಬಳ್ಳಾರಿಯಲ್ಲಿ ಕ್ಯಾಪ್ಟನ್ ರಂಗನಾಥರ ಗರಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವುದು ಒಳಿತು ಎಂದುಕೊಂಡು ವಿಜಯಪುರಕ್ಕೆ ಸಬ್ ಎಡಿಟರ್ ಆಗಿ ವಿಜಯವಾಣಿ ಪತ್ರಿಕೆಗೆ ಸೇರಿಕೊಂಡರು. ಅಷ್ಟೇ ಅಲ್ಲ, ಇನ್ನೆಂದು ಟಿವಿಗಳಲ್ಲಿ ಕೆಲಸ ಮಾಡಲೇಬಾರದೆಂದು ಹೆಜ್ಜೆ ಹಾಕಿದ್ದರು.
ಟಿವಿಗಳಲ್ಲಿ ಟೆನ್ಸ್ ತಡೆಯಲಾರದೇ ಸಾಕಾಗಿತ್ತು ಎಂದುಕೊಂಡು ವಿಜಯಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಹುಬ್ಬಳ್ಳಿಗೆ ವರ್ಗಾವಣೆಯಾಯಿತು. ಮನೆಯವರೊಂದಿಗೆ ಬೆರೆಯುವ ಅವಕಾಶ ಮತ್ತೆ ದೊರೆತಿತ್ತು.
ಹುಬ್ಬಳ್ಳಿ ವಿಜಯವಾಣಿಯಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗಲೇ, ದಿಗ್ವಿಜಯ ಟಿವಿ ಆರಂಭವಾಗತೊಡಗಿತು. ಟಿವಿಗಳ ಬಗ್ಗೆ ಮೊದಲೇ ಬೇಸರಿಸಿಕೊಂಡಿದ್ದ ಹರ್ಷರವರು, ತಾವೇಂದು ಆ ಕಡೆ ಮುಖ ಮಾಡುವುದು ಬೇಡವೆಂದುಕೊಂಡಿದ್ದರು. ಆದರೆ, ವಿಜಯವಾಣಿ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮೋಹನ ಹೆಗಡೆ, ಹರ್ಷ ಕುಲಕರ್ಣಿಯವರಲ್ಲಿದ್ದ ಟಿವಿ ವರದಿಗಾರರನ್ನ ಕಂಡು ಫೀಲ್ಡಿಗೆ ಇಳಿಸಿದರು.
ಯಾವ ಕೆಲಸ ಮಾಡಬಾರದೆಂದುಕೊಂಡಿದ್ದರೋ ಅದೇ ಕೆಲಸವನ್ನ ಹಿರಿಯರ ಆಶೀರ್ವಾದದಿಂದ ಮಾಡಿ ಮುಗಿಸಿ, ಅದೇ ಫೀಲ್ಡಲ್ಲಿ ಈಗ ಜಿಲ್ಲಾ ಪ್ರಶಸ್ತಿಯನ್ನ ಪಡೆದಿದ್ದಾರೆ.
ಹುಬ್ಬಳ್ಳಿಯಲ್ಲಿ ತಾಯಿ ಸುನೀತಾ, ಪತ್ನಿ ಭವ್ಯಾ ಹಾಗೂ ಮಗಳು ಮನಸ್ವಿ ಜೊತೆ ಹರ್ಷ ಕುಲಕರ್ಣಿ ಜೀವನ ನಡೆಸುತ್ತಿದ್ದಾರೆ.