ಪೊಲೀಸ್ ಕಸ್ಟಡಿಯಲ್ಲಿದ್ದ ಹ್ಯಾರಿಸ್ ಪಠಾಣ ಮತ್ತೆ ಜೈಲಿಗೆ…!
1 min readಹುಬ್ಬಳ್ಳಿ: ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಹಾಡುಹಗಲೇ ಹಳೇಹುಬ್ಬಳ್ಳಿಯ ಹೊಟೇಲ್ ವೊಂದರ ಬಳಿ ಕೊಲೆಯಾಗಿದ್ದ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಶರಣಾಗತಿಯಾಗಿದ್ದ ಹ್ಯಾರಿಸ್ ಪಠಾಣನನ್ನ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ನಾಲ್ಕು ದಿನದ ಹಿಂದೆ ಕಸ್ಟಡಿಗೆ ಪಡೆದುಕೊಂಡಿದ್ದು, ಇಂದು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಬಾಂಬೆಯ ಶಾರ್ಪ್ ಶೂಟರ್ ಮೂಲಕ ಹತ್ಯೆಯಾಗಿದ್ದ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣದಲ್ಲಿ ಹಲವರನ್ನ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಅದೇ ಪ್ರಕರಣದಲ್ಲಿ ಬೇಕಾಗಿದ್ದ ಹ್ಯಾರಿಸ್ ಪಠಾಣ, ಕಳೆದ ವಾರ ನ್ಯಾಯಾಲಯದ ಮೂಲಕ ಶರಣಾಗತಿ ಹೊಂದಿದ್ದನು.
ನೇರವಾಗಿ ನ್ಯಾಯಾಲಯಕ್ಕೆ ಶರಣಾಗತಿ ಹೊಂದಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ, ಹ್ಯಾರಿಸ್ ಪಠಾಣನನ್ನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಳೆದ ನಾಲ್ಕು ದಿನದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿಸ್ ಪಠಾಣನನ್ನ ವಿಚಾರಣೆ ಮಾಡಿದ ಪೊಲೀಸರು ಮಹತ್ವದ ಮಾಹಿತಿಯನ್ನ ಸಂಗ್ರಹಿಸಿದ್ದಾರೆಂದು ಹೇಳಲಾಗಿದೆ. ಇಂದು ಮತ್ತೆ ನ್ಯಾಯಾಲಯದ ಮೂಲಕ ಹ್ಯಾರಿಸ್ ಪಠಾಣನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.