ಓ ಜೀವವೇ ಮತ್ತೊಂದು “ವರ್ಷ”ದ ಕ್ಷಣಕ್ಕಾಗಿ ಕಾಯುತ್ತಿರುವೇಯಾ….!!!

ನೀ ಇನ್ನೊಂದು ದಿನವನ್ನ ನೋಡುವ ತವಕದಲ್ಲಿದ್ದಿ
ಈ ಅವಕಾಶವನ್ನು ನಿನಗೆ ಕೊಡುತ್ತಿರುವುದು ಭಗವಂತ
ಹಾಗಾದ್ರೇ, ನೀ ಇರಬೇಕಿರುವುದು ಹೇಗೆ….
ಹೊಸ ವರ್ಷವೆಂದು ಒಪ್ಪಿಕೊಂಡು ಬದಲಾಗುವ ದಿನಕ್ಕಾಗಿ ನೀವೂ ರೆಡಿಯಾಗ್ತಿದ್ದೀರಿ. ಜೀವನದಲ್ಲಿ ಇದು ಕೂಡಾ ನಿಮಗೆ ಖುಷಿ ಕೊಡುವ ಸಮಯವೂ ಆಗಿರಬಹುದು, ಆದರೆ, ಇದು ನಿಮ್ಮ ಬದುಕಿನ ಉದ್ದೇಶವಾ…
ಅಲ್ಲ, ಸಾಧ್ಯವೇ ಇಲ್ಲ ಬಿಡಿ. ಜೀವನದಲ್ಲಿನ ಒಂದು ಭಾಗವಷ್ಟೇ. ಮನುಷ್ಯನ ಖುಷಿಗೆ, ಸಂಭ್ರಮಕ್ಕೆ ಪ್ರತಿ ಕ್ಷಣಗಳನ್ನ ತನಗೆ ಒಪ್ಪುವ ಹಾಗೇ ಅಂದುಕೊಂಡು ಮುನ್ನಡೆಯುತ್ತಾನೆ. ಅದು ಮಾನವನ ಗುಣ ಕೂಡಾ.
ಆದರೆ, ಮನುಷ್ಯನ ನಿಜವಾದ ಮರ್ಮವೇನು. ಆತ ಜೀವಿಸುತ್ತಿರುವ ರೀತಿ ಎಂತಹದ್ದು. ಇತ್ತೀಚಿನ ದಿನಗಳಲ್ಲಿ ಬದುಕು ಸಾಗಿಸುತ್ತಿರುವ ರೀತಿಯೂ ಅತಿರೇಕದ ಬದಲಾವಣೆ ಮೈಯೊಡ್ಡಿಬಿಟ್ಟಿದ್ದಾನೆಂದು ಅನಿಸದೇ ಇರದು.
ದಶಕಗಳ ಹಿಂದಿನ ‘ಇಂದಿನ’ ಹಿರಿಯರು ತಮ್ಮ ಹಿರಿಯರ ಮತ್ತೂ ಆಗೀನ ದಿನಗಳನ್ನ ನೆನೆದು ಈಗೀನ ದುರ್ದಿನಗಳನ್ನ ಕಳೆಯುತ್ತಿದ್ದಾರೆಯಾದರೂ, ಇಂದಿನ ದಿನಗಳನ್ನ ದುರ್ದಿನಗಳು ಎನ್ನುವ ಸ್ಥಿತಿ ಬಂದಿರುವುದು ಏಕೆ..
ಇಂದು ಸಂಬಂಧಗಳು ವಯಕ್ತಿಕವಾಗಿಯೂ, ಹಣದ ರೂಪವಾಗಿಯೂ ಕಾಣತೊಡಗಿವೆ. ಎಲ್ಲವೂ ಆಡಂಬರದ ಹಿಂದೆ ಮುಖ ಮಾಡಿವೆ. ತಮ್ಮಲ್ಲಿರದ್ದನ್ನ ತೋರಿಸುವ ಆತುರ ಹೆಚ್ಚಾಗಿದೆ. ಕೂಡು ಕುಟುಂಬಗಳ ಒಡಂಬಡಿಕೆ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿವೆ.
ಸಮಾಧಾನ ಎನ್ನುವುದು ಸ್ಮಶಾನ ಸೇರಿದೆ. ನಂಬಿಕೆ ಮೂರು ದಾರಿ ಸೇರಿದೆ. ಪ್ರಾಮಾಣಿಕತೆ ನಾಮಕಾವಾಸ್ತೆ ಎನ್ನುವಂತಾಗಿದೆ. ಹಿರಿಯರಿಗೆ ಕೊಡಬೇಕಾದ ಗೌರವ ರಸ್ತೆಯುದ್ದಕ್ಕೂ ಹೊರಳಾಡತೊಡಗಿದೆ. ಎಲ್ಲರಿಗಿಂತ ತಾನೇ ಮೇಲು ಎನ್ನುವ ಮನೋಭಾವನೆ ಹೆಚ್ಚಾಗಿದೆ.
ನಿಜ ಹೇಳಬೇಕೆಂದರೆ ಹೊಸ ವರ್ಷದ ದಿನವಾದರೂ, ನಿಮ್ಮಲ್ಲಿರುವ ಮನುಷ್ಯನೆಂಬ ಕಲ್ಪನೆ ಜಾಗೃತರಾಗಬೇಕಿದೆ. ಡಿಜಿಟಲ್ ಯುಗದಲ್ಲಿ ಜೀವನವನ್ನ ಹಾಳು ಮಾಡಿಕೊಳ್ಳದೇ ಅಖಂಡ ಭಾರತದ ಸಂಸ್ಕೃತಿಯನ್ನ ಉಳಿಸಬೇಕಿದೆ. ಜೀವನ ಮುಂದೆಯೂ ಮತ್ತಷ್ಟು ಸಂತಸದಿಂದ ಸಾಗಬೇಕಿದೆ, ಹೊಸ ಬೆಳಕು ಮತ್ತೂ ಭರವಸೆಯೊಂದಿಗೆ…
ಹ್ಯಾಪಿ ನ್ಯೂ ಇಯರ್
ಡಿಯರ್ ವಿವರ್ಸ್…