ಹ್ಯಾಪಿ ಬರ್ತಡೇ ಕಾರಜೋಳಜೀ

ಹ್ಯಾಪಿ ಬರ್ತಡೇ ಕಾರಜೋಳಜ
ಮುಧೋಳ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದು ತಮ್ಮ 70ನೇ ಜನ್ಮ ದಿನಾಚರಣೆಯನ್ನ ಹುಟ್ಟೂರಿನಲ್ಲೇ ಆಚರಿಸಿಕೊಂಡರು.
ಮುಧೋಳನಲ್ಲಿ ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿ, ಗೋಶಾಲೆಯಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಇದೇ ಸಮಯದಲ್ಲಿ ಹನುಮಾನ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ದಾನಮ್ಮ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು, ಅಭಿಮಾನಿಗಳೊಂದಿಗೆ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡರು.
ಉಪಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕಾರಜೋಳ ಅವರಿಗೆ ಕರ್ನಾಟಕ ವಾಯ್ಸ್ ಕಡೆಯಿಂದಲೂ ಹ್ಯಾಪಿ ಬರ್ತಡೇ…