Posts Slider

Karnataka Voice

Latest Kannada News

ನಿರ್ಭಯಾ ಕೀಚಕರಿಗೆ ಬಿತ್ತು ಕುಣಿಕೆ: ಜೈಲು ಹೊರಗೆ ವಿಜಯೋತ್ಸವ

1 min read
Spread the love

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ದುರುಳರನ್ನ ಇಂದು ಬೆಳಗಿನ ಜಾವ 5:30ಕ್ಕೆ ಗಲ್ಲಿಗೇರಿಸಲಾಯಿತು. 2012ರಲ್ಲಿ ನಡೆದಿದ್ದ ಪ್ರಕರಣಕ್ಕೆ ಇಂದು ನ್ಯಾಯ ಸಿಕ್ಕಿದ್ದು, ಏಳು ವರ್ಷ ಕಾದು ಕುಳಿತ ಯುವತಿಯ ತಾಯಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ.

ಅಪರಾಧಿಗಳಾದ ಪವನ ಗುಪ್ತಾ, ಮುಕೇಶ ಸಿಂಗ್, ಅಕ್ಷಯ ಠಾಕೂರ ಹಾಗೂ ವಿನಯ ಶರ್ಮಾ ಎಂಬ ಕೀಚಕರಿಗೆ ಗಲ್ಲಿಗೇರಿದವರು. ನಾಲ್ಕು ಅಪರಾಧಿಗಳನ್ನ ಏಕಕಾಲಕ್ಕೆ ಗಲ್ಲಿಗೇರಿಸಲಾಗಿದೆ.

ಅರೋಪಿಗಳು ಗಲ್ಲನ್ನ ತಪ್ಪಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಕೊನೆಗಳಿಗೆಯಲ್ಲೂ ಕೂಡಾ ಕಾನೂನು ಹೋರಾಟ ಮಾಡುವ ವಿಫಲ ಯತ್ನ ಮಾಡಿದ್ದರು.

ದುರುಳರನ್ನ ತಿಹಾರ ಜೈಲಿನಲ್ಲಿ ಗಲ್ಲಿಗೇರಿಸಿದ ಕೆಲವೇ ನಿಮಿಷಗಳಲ್ಲಿ ಜೈಲಿನ ಹೊರ ಭಾಗದಲ್ಲಿ ವಿಜಯೋತ್ಸವ ನಡೆಸಲಾಯಿತು. ನಿರ್ಭಯಾ ಅಮರ ರಹೇ ಎಂದು ಘೋಷಣೆ ಕೂಗಲಾಯಿತು.


Spread the love

Leave a Reply

Your email address will not be published. Required fields are marked *

You may have missed