ಶಾಸಕ ಅಮೃತ ದೇಸಾಯಿಯವರ “ಹಂಗರಕಿ” ಬಸ್ ನಿಲ್ದಾಣದಲ್ಲೇ ಹೆಣ…!

ಧಾರವಾಡ: ತಾಲೂಕಿನ ಹಂಗರಕಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡು ಬಂದಿದ್ದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಇಂದು ಬೆಳಿಕಿಗೆ ಬಂದಿದೆ.

ವಿಜಯಪುರ ಮೂಲದವನೆಂದು ಹೇಳಿಕೊಂಡಿದ್ದ ವ್ಯಕ್ತಿಗೆ ದಾರಿ ಹೋಕರು, ಅನ್ನವನ್ನ ನೀಡಿದ್ದರೂ, ಅದನ್ನ ಸೇವಿಸದೇ ಅಲ್ಲಿಯೇ ಸಾವಿಗೀಡಾಗಿದ್ದಾನೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾನೆಂಬುದು ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಗರಗ ಠಾಣೆಯ ಪೊಲೀಸರು, ಸ್ಥಳದಲ್ಲಿ ಪರಿಶೀಲನೆ ನಡೆಸಿ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸಾವಿಗೀಡಾಗಿರುವ ವ್ಯಕ್ತಿ ಲಾಕ್ ಡೌನ್ ಸಮಯದಲ್ಲಿ ಕಂಡು ಬಂದಿದ್ದನೆಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.