Posts Slider

Karnataka Voice

Latest Kannada News

“ಅಮೃತ ಧಣಿ” ಊರಿನ ಮಕ್ಕಳಿಗೂ ಪುಸ್ತಕ ಹಂಚಿದ ‘ಬಸವರಾಜ ಕೊರವರ ಗೆಳೆಯರ ಬಳಗ’…

Spread the love

ಧಾರವಾಡ: ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಉತ್ತಮ‌ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಧಾರವಾಡ- 71ಕ್ಷೇತ್ರದಲ್ಲಿ ಮಾದರಿಯಾಗುವ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಗೆಳೆಯರ ಬಳಗ, ಇಂದು ಶಾಸಕರ ಊರನ್ನೂ ತಲುಪಿದೆ.

ಸರಕಾರಿ ಶಾಲೆಗೆ ತೆರಳಿದ ಗೆಳೆಯರ ಬಳಗವೂ ಪ್ರತಿ ವಿದ್ಯಾರ್ಥಿಗಳಿಗೂ ನೋಟ್ ಬುಕ್ ಗಳನ್ನ ನೀಡಲಾಯಿತು. ಹಂಗರಕಿ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದ್ದರು.

ಧಾರವಾಡ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬಸವರಾಜ ಕೊರವರ ಗೆಳೆಯರ ಬಳಗ ಹೊಸ ಚೈತನ್ಯ ಮೂಡಿಸಿದ್ದು, ಸ್ವತಃ ಬಸವರಾಜ ಕೊರವರ ಭಾಗವಹಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *